ಕೆಎನ್ಎನ್ಡಿಜಿಟಲ್ ಡೆಸ್ಕ್ : ರೈಲು, ಕಾರು, ದೋಣಿ, ವಿಮಾನ ಯಾವುದೇ ಆಗಲೇ ದೂರದ ಪ್ರಯಾಣವಿದ್ರೆ, ಪ್ರಯಾಣಿಕರು ಹಸಿವಿನಿಂದ ಬಳಲೋದು ಕಾಮನ್. ಬಹಳಷ್ಟು ಮಂದಿ ತಮ್ಮ ಲಗೇಜ್ ಗಳಲ್ಲಿ ಡೊಮಿನೋ ಅಥವಾ ಸ್ಯಾಂಡ್ ವಿಚ್ ಒಯ್ಯುತ್ತಾರೆ, ಸಾಮಾನ್ಯ ಅವುಗಳನ್ನ ಫಾಸ್ಟ್ ಫುಡ್ ಕೇಂದ್ರಗಳಲ್ಲಿ ತಯಾರಿಸಲಾಗುತ್ತದೆ. ಯಾಕಂದ್ರೆ, ಅವುಗಳನ್ನ ತಿನ್ನಲು ಮತ್ತು ಸಾಗಿಸೋಕೆ ಸುಲಭ ಅನ್ನೋದು ಅಂತಾ. ಆದಾಗ್ಯೂ, ಸ್ಯಾಂಡ್ವಿಚ್ನಿಂದಾಗಿ 1.43 ಲಕ್ಷ ರೂ.ಗಳ ದಂಡವನ್ನ ಪಾವತಿಸಬೇಕಾಯಿತು.
ಹೌದು, ಇದು ಅಕ್ಷರಶಃ ಸತ್ಯ.. ಆಸ್ಟ್ರೇಲಿಯಾದ ರೂಪದರ್ಶಿ ಜೆಸ್ಸಿಕಾ ಲೀ ತನ್ನ ಲಗೇಜ್ʼನಲ್ಲಿ ಸ್ಯಾಂಡ್ ವಿಚ್ ಕೊಂಡೊಯ್ಯುತ್ತಿದ್ದುದನ್ನ ಬಹಿರಂಗಪಡಿಸದಿದ್ದಕ್ಕಾಗಿ ಆಸ್ಟ್ರೇಲಿಯಾದ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು 2,664 ಡಾಲರ್ ದಂಡ ವಿಧಿಸಿದ್ದಾರೆ. ಅದು ಕೂಡ 28 ದಿನಗಳ ಒಳಗೆ ಪಾವತಿಸಲು ಆದೇಶಿಸಲಾಗಿದೆ.
19 ವರ್ಷದ ಜೆಸ್ಸಿಕಾ ಲೀ ಇದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾವಿರಾರು ವೀಕ್ಷಕರು ವೀಕ್ಷಿಸಿದರು. ಜೆಸ್ಸಿಕಾ ಲೀ ಯುರೋಪ್ʼನಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿದ್ದಾರೆ. ಅವ್ರು ಪ್ರಯಾಣ ಸರಿಸುಮಾರು 11 ಗಂಟೆಗಳ ಕಾಲವಿದ್ದು, ಈ ಸಂದರ್ಭದಲ್ಲಿ ತಮ್ಮ ಹಸಿವು ನಿಗಿಸಲು ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ನಿಂತಾಗ, ಅವ್ರು ಸ್ಯಾಂಡ್ವಿಚ್ ಖರೀದಿಸಿದರು. ಜೆಸ್ಸಿಕಾ ಲೀ ವಿಮಾನ ನಿಲ್ದಾಣದಲ್ಲಿ ಅರ್ಧ ಸ್ಯಾಂಡ್ ವಿಚ್ ತಿಂದರು. ವಿಮಾನದ ಉಳಿದ ಭಾಗವನ್ನ ತಿನ್ನಬೇಕಾಗಿತ್ತು. ಆದ್ರೆ, ತಿನ್ನಲು ಸಾಧ್ಯವಾಗ್ದೇ ಬ್ಯಾಗ್ನಲ್ಲಿ ಇರಿಸಿದ್ದಾರೆ. ಆದ್ರೆ, ಆಸ್ಟ್ರೇಲಿಯಾದ ವಿಮಾನ ನಿಲ್ದಾಣದಲ್ಲಿ, ಸ್ಯಾಂಡ್ ವಿಚ್ ಬಗ್ಗೆ ವರದಿ ಮಾಡಲು ಮರೆತಿದ್ದು, ಇದರ ಪರಿಣಾಮವಾಗಿ, ಕಸ್ಟಮ್ಸ್ ಅಧಿಕಾರಿಗಳು ಆಕೆಗೆ 2,664 ಡಾಲರ್ ದಂಡ ವಿಧಿಸಿದ್ದಾರೆ. ಅದ್ರಂತೆ, ಜೆಸ್ಸಿಕಾ ಲೀ ಇದು ತನ್ನ ತಪ್ಪು ಮತ್ತು ದಂಡವನ್ನ ಪಾವತಿಸುವುದಾಗಿ ಹೇಳುವ ಮೂಲಕ ವೀಡಿಯೊವನ್ನ ಮುಕ್ತಾಯಗೊಳಿಸಿದ್ದಾರೆ.