ಚಿಕ್ಕಮಗಳೂರು: ಆಕೆ ಪತಿ ಕೋವಿಡ್ ಸಂದರ್ಭದಲ್ಲಿ ತೀರಿಕೊಂಡಿದ್ದರು. ಈ ನಡುವೆಯೂ ಕಷ್ಟದ ನಡುವೆ ಜೀವನ ಸಾಗಿಸುತ್ತಿದ್ದರು. ಆದ್ರೇ ಭಾರೀ ಮಳೆಯಿಂದಾಗಿ ಇದ್ದ ಮನೆ ಕೂಡ ಕುಸಿತಗೊಂಡು ಕುಟುಂಬ ಬೀದಿಗೆ ಬಿದ್ದಿತ್ತು. ಶೆಡ್ ಹಾಕಿಕೊಂಡು ಅದರಲ್ಲಿಯೇ ವಾಸವಾಗಿದ್ದರು. ಈ ವಿಷಯ ತಿಳಿದು ಆಕೆಯ ಮನೆಗೆ ತೆರಳಿದಂತ ಜಿಲ್ಲಾ ಉಸ್ತುವಾರಿ ಸಚಿವರು, ವೈಯಕ್ತಿಕವಾಗಿ 50,000 ಪರಿಹಾರ ಹಣವನ್ನು ನೀಡಿದ್ದಾರೆ.
ಹೌದು.. ಇಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವರಾಗಿರುವಂತ ಭೈರತಿ ಬಸವರಾಜ ನೆರೆ ವೀಕ್ಷಿಸಿದರು. ಈ ವೇಳೆಯಲ್ಲಿ ಲೀಲಾ ಎಂಬುವಂತ ಕುಟುಂಬವು ಮನೆ ಕಳೆದುಕೊಂಡು ಜೋಪಡಿಯಲ್ಲಿ ವಾಸಿಸುತ್ತಿದ್ದಂತ ಮಾಹಿತಿ ತಿಳಿದು, ಅಲ್ಲಿಗೆ ತೆರಳಿದರು.
ಪತಿಯನ್ನು ಕಳೆದುಕೊಂಡಿದ್ದಂತ ಲೀಲಾ, ತನ್ನ ನಾಲ್ವರು ಹೆಣ್ಣಮಕ್ಕಳನ್ನು ಸಂಕಷ್ಟದ ನಡುವೆಯೂ ಓದಿಸುತ್ತಿರೋದು, ಮನೆಯನ್ನು ಕಳೆದುಕೊಂಡು ಜೋಪಡಿಯಲ್ಲಿ ವಾಸಿಸುತ್ತಿರೋದನ್ನು ಕಂಡು ಸಚಿವ ಭೈರತಿ ಬಸವರಾಜು ಭಾವುಕರಾದರು. ಆ ಕ್ಷಣವೇ ವೈಯಕ್ತಿಕವಾಗಿ 50 ಸಾವಿರ ಪರಿಹಾರವನ್ನು ನೀಡಿದರು.
ಅಲ್ಲದೇ ರಾಜ್ಯ ಸರ್ಕಾರದಿಂದ ಒಂದು ವಾರದಲ್ಲೇ ಐದು ಲಕ್ಷ ಪರಿಹಾರವನ್ನು ನೀಡಲಾಗುತ್ತದೆ. ಭಾರೀ ಮಳೆಯಿಂದಾಗಿ ಮನೆ ಕಳೆದುಕೊಂಡಿರುವಂತ ಲೀಲಾ ಕುಟುಂಬಕ್ಕೆ ಸರ್ಕಾರ ಹೊಸ ಮನೆ ಕಟ್ಟಿಕೊಳ್ಳೋದಕ್ಕೆ ನೆರವಾಗಲಿದೆ ಎಂಬುದಾಗಿ ಹೇಳಿದರು.
BIG NEWS: ಜೈಲುಗಳಲ್ಲಿ ಗಾಂಜಾ ಪೂರೈಕೆ, ಅಕ್ರಮ ನಡೆಯದಂತೆ ಬಿಗಿ ಕ್ರಮ – ಗೃಹ ಸಚಿವ ಅರಗ ಜ್ಞಾನೇಂದ್ರ