ವಿಜಯಪುರ : ವಿದ್ಯಾರ್ಥಿಗಳ ಅನುಕೂಲಕ್ಕಾಗಿ 2022-23ನೇ ಸಾಲಿನಲ್ಲಿ ಸೇವಾ ಸಿಂಧು ಯೋಜನೆಯಡಿ ವಿದ್ಯಾರ್ಥಿ ರಿಯಾಯತಿ ಪಾಸ್ ಅರ್ಜಿ ಪಾರಂಭವಾಗಿದೆ. ಎಲ್ಲಾ ವರ್ಗದ ವಿದ್ಯಾರ್ಥಿಗಳು ಸೇವಾ ಸಿಂಧು ಯೋಜನೆಯಡಿ ವಿದ್ಯಾರ್ಥಿ ರಿಯಾಯತಿ ಪಾಸ್ಗಳಿಗೆ ಅರ್ಜಿ ಸಲ್ಲಿಸಿ, ಅವಶ್ಯಕ ದಾಖಲೆಗಳನ್ನು ಹಾಗೂ ನಿಗದಿಪಡಿಸದ ಪಾಸ್ ದರವನ್ನು ಭರಣ ಮಾಡಿ ಪಾಸ್ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಕೋರಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಉಚಿತ ರಿಯಾಯತಿ ಬಸ್ ಪಾಸ್ಗಳನ್ನು ಪಡೆಯಲು ಕೋರಲಾಗಿದೆ.
ಅದರಂತೆ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜುಲೈ 16ರವರೆಗೆ ಉಚಿತವಾಗಿ ಪ್ರಯಾಣಿಸಲು ಹಾಗೂ ಆಗಸ್ಟ್-2022ರವರೆಗೆ ಎರಡು ತಿಂಗಳ ಪಾಸ್ ಮೊತ್ತವನ್ನು ಪಾವತಿಸಿ, ಬಸ್ ಪಾಸ್ ಅವಧಿಯನ್ನು ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಉಚಿತವಾಗಿ ಪ್ರಯಾಣಿಸಲು ನೀಡಿದ ಕಾಲಾವಕಾಶ ಮುಗಿದಿದ್ದು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಸ್ ಕೌಂಟರಗಳಿಗೆ ಸಂಪರ್ಕಿಸಿ, ತಮ್ಮ ಪಾಸ್ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ. ಇಲ್ಲವೇ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ, ಹೊಸ ಬಸ್ ಪಾಸ ಪಡೆದುಕೊಳ್ಳಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BREAKING NEWS: ಬೆಂಗಳೂರಿನಲ್ಲಿ ಕತ್ತು ಕತ್ತರಿಸಿ ʻ ಪಾಗಲ್ ಪ್ರೇಮಿಯ ಬರ್ಬರ ಹತ್ಯೆʼ
SHOCKING NEWS: OMG… ಪತ್ನಿ ಕೊಲೆ ಮಾಡಿ ಶಾಲಾ ಅಡುಗೆ ಮನೆಯಲ್ಲಿ ಶವ ಕುದಿಸಿ,3 ಮಕ್ಕಳೊಂದಿಗೆ ಪರಾರಿಯಾದ ಪತಿ