ಬೆಂಗಳೂರು : ಬಿಪಿಎಲ್ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಲು ಮುಂದಾಗಿದ್ದು, ಬಿಪಿಎಲ್ ಪಡಿತರದಾರರಿಗೆ ಅಕ್ಕಿಯ ಜೊತೆಗೆ ನೀಡುತ್ತಿದ್ದ ಜೋಳ, ರಾಗಿ ವಿತರಣೆ ಆಗಸ್ಟ್ ನಂತರ ಸ್ಥಗಿತಗೊಳ್ಳಲಿದೆ.
BIGG NEWS : ಬಡ್ತಿ ನಿರೀಕ್ಷೆಯಲ್ಲಿದ್ದ ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕರಿಗೆ ಗುಡ್ ನ್ಯೂಸ್
ಕೇಂದ್ರದ ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರ್ಕಾರವು ಪಡಿತರ ಚೀಟಿದಾರರಿಗೆ ಅಕ್ಕಿಯ ಜೊತೆಗೆ ರಾಗಿ, ಜೋಳ ವಿತರಣೆ ಮಾಡುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಮೆಟ್ರಿಕ್ ಟನ್ ರಾಗಿ, 1 ಲಕ್ಷ ಮೆಟ್ರಿಕ್ ಟನ್ ಜೋಳ, 2.60 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿ ಮಾಡಿತ್ತು, ಕೇಂದ್ರದ ಸೂಚನೆಯಂತೆ ಕಳೆದ ಮೂರು ತಿಂಗಳಿನಿಂದ ವಿತರಣೆ ಮಾಡಲಾಗುತ್ತಿತ್ತು. ಈಗ ಸಂಗ್ರಹಣೆ ಮಾಡಿದ್ದ ರಾಗಿ, ಜೋಳ ಖಾಲಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ರಾಗಿ, ಜೋಳ ವಿತರಣೆ ಸ್ಥಗಿತಗೊಳಿಸಲಾಗುತ್ತಿದೆ.
BIGG NEWS : `ಫೈರ್ ಮನ್’ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಹಿಸುದ್ದಿ : ಶೀಘ್ರವೇ ನೇಮಕಾತಿ ಪತ್ರ ವಿತರಣೆ
ಉತ್ತರ ಕರ್ನಾಟಕದಲ್ಲಿ ಬಿಪಿಎಲ್ ಪಡಿತರದಾರರಿಗೆ ಅಕ್ಕಿಯ ಜೊತೆಗೆ ಜೋಳ ಆಗಸ್ಟ್ ನಂತರ ಸ್ಥಗಿತಗೊಂಡರೆ, ದಕ್ಷಿಣ ಕರ್ನಾಟಕ ಭಾಗದಲ್ಲಿ ಸೆಪ್ಟೆಂಬರ್ ನಂತರ ರಾಗಿ ಸ್ಥಗಿತಗೊಳ್ಳಲಿದೆ. ಈ ಹಿಂದೆ ನೀಡುತ್ತಿದ್ದಂತೆ 10 ಅಕ್ಕಿ ವಿತರಣೆ ಮುಂದುವರೆಯಲಿದೆ ಎನ್ನಲಾಗಿದೆ.