ಬೆಂಗಳೂರು: ಶಾಲಾ-ಕಾಲೇಜು( School and College ) ಆರಂಭಗೊಂಡು ಕೆಲ ತಿಂಗಳ ಬಳಿಕ, ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ( BMTC Student Bus Pass ) ಅವಧಿಯನ್ನು ವಿಸ್ತರಿಸಿತ್ತು. ಈ ಬಳಿಕ ಇದೀಗ 2022-23ನೇ ಸಾಲಿನ ವಿದಯಾರ್ಥಿ ರಿಯಾಯಿತಿ ಪಾಸು ವಿತರಿಸೋದಕ್ಕೆ ಮುಂದಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬಿಎಂಟಿಸಿಯು 2022-23ನೇ ಸಾಲಿನ ವಿದ್ಯಾರ್ಥಿ ಪಾಸಿಗಾಗಿ ಆನ್ ಲೈನ್ ಅರ್ಜಿಯನ್ನು ಸೇವಾಸಿಂಧು ಪೋರ್ಟ್ ನಲ್ಲಿ ಹಾಗೂ ಬಿಎಂಟಿಸಿ ವೆಬ್ ಸೈಟ್ ನಲ್ಲಿ ಒಜಗಿಸಲಾಗಿದೆ. ವಿದ್ಯಾರ್ಥಿಗಳು ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದೆ.
ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿ ಪಾಸುಗಳನ್ನು ದಿನಾಂಕ 18-07-2022 ರಿಂದ 100 ಬೆಂಗಳೂರು ಒನ್ ಕೇಂದ್ರಗಳ ಮೂಲಕ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4.30ರವರೆಗೆ ವಾರದ ಎಲ್ಲಾ ದಿನಗಳಲ್ಲಿ ವಿತರಿಸಲಾಗುವುದು ಎಂದು ತಿಳಿಸಿದೆ.
ಇನ್ನೂ ವಿದ್ಯಾರ್ಥಿಗಳು ವಿದ್ಯಾರ್ಥಿ ಪಾಸಿಗಾಗಿ ಅರ್ಜಿ ಸಲ್ಲಿಸಿ, ಪಾಸು ಪಡೆಯಲು ಅನುಕೂಲವಾಗಲೆಂದು ಪ್ರಾಥಮಿಕ, ಪ್ರೌಢ ಶಾಲೆ, ಪಿಯುಸಿ, ಐಟಿಐ, ಡಿಪ್ಲೊಮಾ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ದಿನಾಂಕ 31-07-2022ರವರೆಗೆ ಬಸ್ ನಲ್ಲಿ ಶಾಲಾ-ಕಾಲೇಜಿನ ಶುಲ್ಕದ ರಸೀದಿ, ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಲು ಅವಕಾಶ ನೀಡಿದೆ.
ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಮತ್ತು ವೈದ್ಯಕೀಯ, ಸಂಜೆ ಕಾಲೇಜು, ಪಿಹೆಚ್ ಡಿ ಕಾಲೇಜು ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ವಿದ್ಯಾರ್ಥಿ ಪಾಸಿನೊಂದಿಗೆ ದಿನಾಂಕ 31-08-2022ರವರೆಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದೆ.