ಕೆಎನ್ ಎನ್ ನೂಸ್ ಡೆಸ್ಕ್ : ಮದುವೆ ಅನ್ನೋದು ಅನುರಾಗದ ಅನುಬಂಧವಾಗಿದೆ. ಗಂಡ- ಹೆಂಡತಿ ಇಬ್ಬರು ಪರಸ್ಪರ ಪ್ರೀತಿಯಿಂದ ಇರಬೇಕು. ಅಷ್ಟೇ ಅಲ್ಲದೆ ಗಂಡನ ಮನೆಯವರ ಜೊತೆ ಕೂಡ ಹೊಂದಾಣಿಕೆಯಿಂದ ಇರಬೇಕು. ಒಂದು ಸಲ ಮುನಿಸು ಬಂದ್ರೆ, ಜೀವನ ಮುಕ್ತಾಯವಾಗುತ್ತದೆ. ಇದರಿಂದ ಪತಿಯೊಂದಿಗಿನ ಅನ್ಯೋನ್ಯತೆಯಿಂದ ಇರಬೇಕು.
BIGG NEWS: ಬಾಲಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ; ಮೂವರು ಆರೋಪಿ ಬಂಧನ
ಕೆಲವೊಮ್ಮೆ ದಿನನಿತ್ಯ ಜಗಳವಾಡುತ್ತಿದ್ದರೆ, ವೈವಾಹಿಕ ಜೀವನವೇ ಬೇಜಾರು ಅನಿಸುತ್ತದೆ. ನಂತರ ಇದು ವಿಚ್ಛೇದನಕ್ಕೂ ಕಾರಣವಾಗಬಹುದು. ಆದರೆ ನಾವು ಈ ಸಮಯದಲ್ಲಿ ಧೃತಿಗೆಡದೆ. ಏನು ತಪ್ಪಾಗಿದೆ ಅದನ್ನು ಸರಿಪಡಿಸುವ ಕೆಲಸ ಮಾಡಿದರೆ ಸಾಕು. ಏನು ಮಾಡಬೇಕು ಎಂದು ಇಲ್ಲಿದೆ ಟಿಪ್ಸ್ ಗಳು
* ರೊಮ್ಯಾಂಟಿಕ್ ಆಗಿ ಇರಿ:
ರೊಮ್ಯಾಂಟಿಕ್ ಅಂದರೆ ಕೇವಲ ಸೆಕ್ಸ್ ಮಾತ್ರವಲ್ಲ. ಬದಲಾಗಿ ಕ್ಯಾಂಡಲ್ ಲೈಟ್ ಡಿನ್ನರ್, ಒಟ್ಟಿಗೆ ನೃತ್ಯ ಮಾಡೋದು ಹೀಗೆ ಹಲವಾರು ರೊಮ್ಯಾಂಟಿಕ್ ವಿಚಾರಗಳನ್ನು ಮಾಡಿಕೊಳ್ಳಬಹುದು.
* ಕುಟುಂಬದ ಜೊತೆ ಹೊಂದಾಣಿಕೆ
ಇಬ್ಬರೇ ಇರುವುದರಿಂದ ಹಲವು ಸಮಸ್ಯೆಗಳು ಬಂದು ಅದು ನೀರಸ ವೈವಾಹಿಕ ಜೀವನಕ್ಕೆ ಕಾರಣವಾಗುತ್ತದೆ. ಹೀಗಾಗಿ ಮನೆಯವರು ಜೊತೆ ಮಾತನಾಡಿ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಜೀವನ ಖುಷಿಯಾಗಿ ಕಳೆಯಬಹುದು.
BIGG NEWS: ಬಾಲಕಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ಪ್ರಕರಣ; ಮೂವರು ಆರೋಪಿ ಬಂಧನ
* ಒಟ್ಟಿಗೆ ಎಲ್ಲ ಕೆಲಸ ಮಾಡಿ
ಒಟ್ಟಿಗೆ ಒಂದೆ ಮನೆಯಲ್ಲಿ ಇದ್ದರೂ ಸರಿಯಾಗಿ ಮಾತು ಇಲ್ಲ, ಏನು ಇರುವುದಿಲ್ಲ. ಈ ವೇಳೆ ನೀವು ಮಾಡಬೇಕಾಗಿದ್ದು ಆಲ್ ಮೋಸ್ಟ್ ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡುವುದು.ಒಟ್ಟಿಗೆ ಅಡುಗೆ ತಯಾರು ಮಾಡುವುದು, ಮನೆಯಲ್ಲಿ ಒಟ್ಟಿಗೆ ಕುಳಿತು ಸಿನಿಮಾ ನೋಡುವುದು. ಹೀಗೆ ಎಲ್ಲಾ ಕೆಲಸಗಳನ್ನು ಒಟ್ಟಿಗೆ ಮಾಡುವಾಗ ನಮಗೆ ಮತ್ತೆ ಪ್ರೀತಿ ಚಿಗುರುತ್ತದೆ.
* ಬೇಸರ ಯಾಕೆ ಆಗಿದೆ ಎಂದು ತಿಳಿದುಕೊಳ್ಳಿ
ಮೊದಲು ಸ್ವಯಂ-ಮೌಲ್ಯಮಾಪನಕ್ಕೆ ಸಮಯ ತೆಗೆದುಕೊಳ್ಳಿ. ಅಥವಾ ನಿಮ್ಮ ಸಂಗಾತಿಯ ಸಮಸ್ಯೆ ಇದ್ಯಾ ಅನ್ನುವುದನ್ನು ನೋಡಿ. ಇದನ್ನು ಸರಿ ಮಾಡಲು ಸಾಧ್ಯವಿದ್ಯಾ ಎನ್ನುವುದನ್ನು ನೋಡಬೇಕು.