ನವದೆಹಲಿ: ಯುವಕನೊಬ್ಬ ತುಂಬಿ ಹರಿಯುವ ನದಿಗೆ ಹಾರಿ ನಾಪತ್ತೆಯಾಗಿರುವ ಘಟನೆ ನಿನ್ನೆ ಮಹಾರಾಷ್ಟ್ರದ ಮಾಲೆಗಾಂವ್ನಲ್ಲಿ ನಡೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, 23 ವರ್ಷದ ನಯೀಮ್ ಅಮೀನ್ ಎಂಬ ಯುವಕ ತುಂಬಿ ಹರಿಯುವ ಗಿರ್ನಾ ನದಿಗೆ ಹಾರಿದ್ದಾನೆ. ನದಿಗೆ ಹಾರಿದ ನಂತ್ರ ಆತ ನಾಪತ್ತೆಯಾಗಿದ್ದಾನೆ.
मालेगाव, नाशिक : स्टंटबाजी करत तरुणाने गिरणा पुलावरुन नदीत मारली उडी; बेपत्ता तरुणाचा शोध सुरु…#Nashik #Malegaon #HeavyRain #Stunt #ViralVideo
Video Credit: Abhijeet Sonawane pic.twitter.com/zB3HgUIQEW
— Akshay Baisane (अक्षय बैसाणे) (@Baisaneakshay) July 14, 2022
ಸುದ್ದಿ ತಿಳಿಯುತ್ತಿದ್ದಂತೇ ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ತಡರಾತ್ರಿಯವರೆಗೂ ಯುವಕನಿಗಾಗಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಇನ್ನೂ ಆತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಒಂದು ವಾರದಿಂದ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯು ಪುಣೆ, ನಾಸಿಕ್ ಮತ್ತು ಇತರ 3 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆ ಮುಂದುವರಿಯುವ ನಿರೀಕ್ಷೆ ಇದೆ.
BIG NEWS: ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೊನಾ ‘ಬೂಸ್ಟರ್ ಲಸಿಕೆ’
Big Breaking news: ಅಮೆರಿಕದ ಮಾಜಿ ಅಧ್ಯಕ್ಷ ʻಡೊನಾಲ್ಡ್ ಟ್ರಂಪ್ʼ ಅವರ ಮಾಜಿ ಪತ್ನಿ ʻಇವಾನಾ ಟ್ರಂಪ್ʼ ಇನ್ನಿಲ್ಲ…