ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ( Actor Ananth Nag ) ಸೇರಿದಂತೆ ಮೂವರು ಸಾಧಕರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಬೆಂಗಳೂರು ಉತ್ತರ ವಿವಿಯ ಕುಲಪತಿ ಪ್ರೊ.ನಿರಂಜನ ವಾನಳ್ಳಿಯವರು ಮಾಹಿತಿ ನೀಡಿದ್ದು, ಸ್ಯಾಂಡರ್ ವುಡ್ ಹಿರಿಯ ನಟ ಅನಂತ್ ನಾಗ್, ಪ್ರಸಿದ್ಧ ಶಹನಾಯ್ ವಾದಕ ಎಸ್.ಬಲ್ಲೇಶ್ ಭಜಂತ್ರಿ ಹಾಗೂ ಶರತ್ ಶರ್ಮ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
‘ಕಾಶಿ ಯಾತ್ರೆ’ಗೆ ತೆರಳೋರಿಗೆ ಗುಡ್ ನ್ಯೂಸ್: ನಿಮಗೆ ಸಿಗಲಿದೆ 5 ಸಾವಿರ ಸಹಾಯ ಧನ, ನೇರವಾಗಿ ಖಾತೆಗೆ ಜಮ
ಇನ್ನೂ ಬೆಂಗಳೂರು ಉತ್ತರ ವಿವಿಯ ಘಟಿಕೋತ್ಸವವನ್ನು ಕೋಲಾರದ ನಂದಿನಿ ಪ್ಯಾಲೇಸ್ ನಲ್ಲಿ ಶುಕ್ರವಾರ ನಡೆಸಲು ವಿವಿ ನಿರ್ಧರಿಸಿದೆ. ಈ ವಿ.ವಿಯ ಘಟಿಕೋತ್ವವ ಸಮಾರಂಭದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ಸೇರಿದಂತೆ ಮತ್ತಿತರ ಗಣ್ಯರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದ್ದಾರೆ ಎಂದು ಹೇಳಿದ್ದಾರೆ.
ಅಂದಹಾಗೇ, ನಟ ಅನಂತ್ ನಾಗ್ ಕನ್ನಡ, ಹಿಂದಿ, ಮರಾಠಿ, ಮಲೆಯಾಳಿ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ ಕೆಲವೇ ಕೆಲವು ನಟರಲ್ಲಿ ಒಬ್ಬರಾಗಿದ್ದಾರೆ. ವಿಶೇಷವಾಗಿ ಕನ್ನಡ ಚಿತ್ರರಂಗಕ್ಕೆ ನೀಡಿದ ಅನುಪಮ ಸೇವೆಯನ್ನು ಪರಿಗಣಿಸಿ ಅವರಿಗೆ ಬೆಂಗಳೂರು ವಿವಿಯಿಂದ ಡಿ.ಲಿಟರೇಚರ್ ಪದವಿ ನೀಡಲು ತೀರ್ಮಾನಿಸಲಾಗಿದೆ.
ನೀವು ‘ಮಲೆನಾಡಿನಲ್ಲಿ ನಿವೇಶನ ಖರೀದಿ’ಸೋ ಯೋಚನೆಯಲ್ಲಿದ್ದೀರಾ..? ಹಾಗಿದ್ದರೇ ಇಲ್ಲಿದೆ ಸುವರ್ಣಾವಕಾಶ
ಇನ್ನು ಹೆಸರಾಂತ ಶಾಹನಾಯ್ ವಾದಕರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಎಸ್ ಬಲ್ಲೇಶ್ ಭಜಂತ್ರಿ ಅವರು ಸಂಗೀತ ಕ್ಷೇತ್ರದಲ್ಲಿ ನೀಡಿದ ಸೇವೆಯನ್ನು ಗುರುತಿಸಿ ವಿ.ವಿಯು ದಿ..ಲಿಟರೇಚರ್ ಪದವಿ ನೀಡಿ ಗೌರವಿಸಲಿದೆ. ಎಸ್ ಬಲ್ಲೇಶ್ ಭಜಂತ್ರಿ ಅವರು ಭಾರತರತ್ನ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಶಾಹನ್ ವಾಯ್ ವಾದಕರಾದ ಬಿಸ್ಮಿಲ್ಲಾ ಖಾನ್ ಅವರ ಶಿಷ್ಯರಾಗಿದ್ದಾರೆ. ಸುಮಾರು ನಾಲ್ಕು ದಶಕಗಳ ಕಾಲ ಬಿಸ್ಮಿಲ್ಲಾ ಖಾನ್ ಅವರ ಜೊತೆ ಶಹನ್ ವಾಯ್ ನುಡಿಸಿರುವ ಹೆಗ್ಗಳಿಕೆ ಬಜಂತ್ರಿ ಅವರಿಗೆ ಸಲ್ಲುತ್ತದೆ.
ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಕೊಡುಗೆಗಾಗಿ ಬೆಂಗಳೂರಿನ ಶರತ್ ಶರ್ಮ ಅವರು ಕೂಡ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾಗಿದ್ದಾರೆ. ದೇಶದೆಲ್ಲೆಡೆ ಇಂದು ಮನೆಮತರಾಗಿರುವ ಡಿಜಿಟಲ್ ಪೇಮೆಂಟ್ ನ ಹಿಂದಿನ ರೂವಾರಿಯೇ ಶರತ್ ಶರ್ಮ ಎಂದು ಕರೆಯಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಯುಪಿಐ ಡಿಜಿಟಲ್ ಪೇಮೆಂಟ್ ನ ಸೂತ್ರದಾರಿ ಇವರೇ ಎನ್ನುವುದು ವಿಶೇಷ. ಇವರು ನೀಡುತ್ತಿರುವ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ಶರತ್ ಶರ್ಮ ಅವರನ್ನು ವಿಜ್ಞಾನ ಪಡೆ ಸದಸ್ಯರನ್ನಾಗಿ ನೇಮಕ ಮಾಡಿತ್ತು. ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವಂತ ಮೂವರು ಗಣ್ಯರಿಗೆ ಬೆಂಗಳೂರು ಉತ್ತರ ವಿವಿಯಿಂದ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತಿದೆ.
BIGG NEWS : ಕೊಡಗು ಜಿಲ್ಲೆಯಲ್ಲಿ ನಿಲ್ಲದ ಮಳೆಯ ಅವಾಂತರ: ಸೋಮವಾರ ಪೇಟೆಯಲ್ಲಿ ಮತ್ತೊಂದು ಮನೆ ಕುಸಿತ