ಮಂಡ್ಯ: ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಶ್ರೀರಂಗಟಪ್ಟಣ ತಾಲೂಕಿನ ದೊಡ್ಡೇ ಗೌಡನ ಕೊಪ್ಪಲು ಬಳಿಯ ಪುರಾತನ ಪ್ರಸಿದ್ಧ ಕ್ಷೇತ್ರ ಗೌತಮ ಕ್ಷೇತ್ರ ಜಲಾವೃತ ಗೊಂಡಿದೆ. ಕಾವೇರಿ ನದಿ ತೀರದಲ್ಲಿರುವ ಗೌತಮ ಕ್ಷೇತ್ರದ ಮಠ ಜಲಾವೃತ ಗೊಂಡಿದ್ದರೂ, ಇಲ್ಲಿನ ಶ್ರೀಗಜಾನನ ಸ್ವಾಮೀಜಿ ಮಠದಲ್ಲೇ ಇರುವುದು ಆತಂಕ ಸೃಷ್ಟಿಸಿದೆ.
‘ಅಮ್ರಿತ್ ಪೌಲ್ ಮಂಪರು ಪರೀಕ್ಷೆ’ಗೆ ಒಳಪಡಿಸಿದ್ರೇ, ‘ರಾಜಕಾರಣಿ’ಗಳ ಶಾಮೀಲು ಬಟಾಬಯಲು – ಸಿದ್ಧರಾಮಯ್ಯ
ಕಾವೇರಿ ನದಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದಂತೆ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಹೆಚ್ಚಾಗುವ ಸಾಧ್ಯತೆಗಳು ಇವೆ. ಗೌತಮ ಕ್ಷೇತ್ರದ ಸ್ವಾಮಿ ಕ್ಷೇತ್ರ ಬಿಟ್ಟು ಬರಲು ಒಪ್ಪುತ್ತಿಲ್ಲ. ಗಜಾನನ ಸ್ವಾಮೀಜಿ ಶ್ರೀರಂಗಪಟ್ಟಣದ ದೇವೇಗೌಡನ ಕೊಪ್ಪಲಿನಲ್ಲಿನ ಕ್ಷೇತ್ರ ಇದಾಗಿದೆ.
ಪ್ರವಾಹ ಹೆಚ್ಚಾದ್ರೆ ನಡುಗಡ್ಡೆ ಮುಳುಗುವ ಸಾಧ್ಯತೆಯಿದೆ. ಸ್ವಾಮೀಜಿ ಅವರಿಗೆ ನಡುಗಡ್ಡೆ ಬಿಟ್ಟು ಬರಲು ತಾಲೂಕು ಆಡಳಿತ ಮಂಡಳಿ ಸೂಚನೆ ನೀಡಿದ್ದಾರೆ. ಆದರೂ ಕ್ಷೇತ್ರ ಬಿಟ್ಟು ಬರೋದಕ್ಕೆ ಸ್ವಾಮೀಜಿ ನಕಾರ ಎಂದಿದ್ದು ಇದೀಗಾ ಭಾರೀ ಚರ್ಚೆಗೆ ಗ್ರಾಸವಾಗಿದೆ.
‘ಅಮ್ರಿತ್ ಪೌಲ್ ಮಂಪರು ಪರೀಕ್ಷೆ’ಗೆ ಒಳಪಡಿಸಿದ್ರೇ, ‘ರಾಜಕಾರಣಿ’ಗಳ ಶಾಮೀಲು ಬಟಾಬಯಲು – ಸಿದ್ಧರಾಮಯ್ಯ
ಗೌತಮ ಕ್ಷೇತ್ರದ ಗಜಾನನ ಸ್ವಾಮೀಜಿ, ನನಗೆ ಏನೂ ತೊಂದರೆ ಆಗಿಲ್ಲ, ಇಲ್ಲಿ ನಾನು ಸುರಕ್ಷಿತವಾಗಿದ್ದೇನೆ, ಊಟ ತಯಾರು ಮಾಡಿಕೊಳ್ಳುಲು ಧವಸ, ಧಾನ್ಯ ಸೇರಿದಂತೆ ಎಲ್ಲಾ ವಸ್ತುಗಳು ಇಲ್ಲಿ ಶೇಖರಣೆಯಾಗಿದೆ, ನಾವು ನೆಲಸಿರುವ ಮಠ ನದಿಗಿಂತ ಬಹಳ ಎತ್ತರ ಪ್ರದೇಶದಲ್ಲಿದೆ ಯಾರು ಆತಂಕ ಪಡುವುದುಬೇಡ ಎಂದಿದ್ದಾರೆ.