ಬೆಂಗಳೂರು: ಜುಲೈ.17ರಂದು ನೀಟ್ ಪರೀಕ್ಷೆಗೆ ಹಾಜರಾಗುವಂತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಬಹುಬೇಗ ಹೊರಟು ಹೋಗುತ್ತಿದ್ದಂತ ಸಿದ್ಧಾರೂಢ ಸ್ವಾಮಿ ಹುಬ್ಬಳ್ಳಿ – ಕಾರಟಗಿ ಡೈಲಿ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು 40 ನಿಮಿಷ ತಡವಾಗಿ ಸಂಚಾರ ಆರಂಭಿಸಲು ಅವಕಾಶ ಮಾಡಿಕೊಡಲಾಗಿದೆ.
ಈ ಬಗ್ಗೆ ನೈಋತ್ಯ ರೈಲ್ವೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ನೀಟ್ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ಜುಲೈ 17 ರಂದು ರೈಲು ಸಂಖ್ಯೆ 17303, 40 ನಿಮಿಷಗಳ ಕಾಲ ತಡವಾಗಿ ಚಲಿಸಲಿದೆ ಎಂದು ತಿಳಿಸಿದೆ.
ಬೆಂಗಳೂರಿನ ಇಬ್ಬರು ಭಯೋತ್ಪಾದಕ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ
ಹುಬ್ಬಳ್ಳಿಯಲ್ಲಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ರೈಲು ಸಂಖ್ಯೆ 17303 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ – ಕಾರಟಗಿ ಡೈಲಿ ಎಕ್ಸ್ಪ್ರೆಸ್ ರೈಲು ಜುಲೈ 17 ರಂದು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಸಾಯಂಕಾಲ 5.20 ರ (ನಿಗದಿತ ನಿರ್ಗಮನ ಸಮಯ) ಬದಲಾಗಿ ಸಾಯಂಕಾಲ 6 ಗಂಟೆಗೆ ಹೊರಡಲಿದೆ ಎಂದಿದೆ.
ಇನ್ನೂ ವಿಜಯಪುರ – ಮಂಗಳೂರು ನಡುವೆ ನಿತ್ಯ ಸಂಚರಿಸುವ ರೈಲುಗಳ ಸೇವೆಯ ಅವಧಿ ವಿಸ್ತರಣೆ ಮಾಡಲಾಗಿದೆ. ರೈಲು ಸಂಖ್ಯೆ 07377 / 07378 ವಿಜಯಪುರ – ಮಂಗಳೂರು ಜಂಕ್ಷನ್ – ವಿಜಯಪುರ ಡೈಲಿ ಎಕ್ಸ್ಪ್ರೆಸ್ ಸ್ಪೆಷಲ್ ರೈಲುಗಳ ಸೇವೆಯ ಅವಧಿಯನ್ನು ವಿಸ್ತರಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ.
‘ಶಿವಮೊಗ್ಗ ಜನತೆ’ಗೆ ಗುಡ್ ನ್ಯೂಸ್: ‘ಡಿಸೆಂಬರ್’ನಲ್ಲಿ ‘ವಿಮಾನ ನಿಲ್ದಾಣ’ ಲೋಕಾರ್ಪಣೆ
ರೈಲು ಸಂಖ್ಯೆ 07377 ವಿಜಯಪುರ – ಮಂಗಳೂರು ಜಂಕ್ಷನ್ ಡೈಲಿ ಎಕ್ಸ್ಪ್ರೆಸ್ ಸ್ಪೆಷಲ್ ರೈಲಿನ ಸೇವೆಯನ್ನು 30.09.2022 ರವರೆಗೆ ವಿಸ್ತರಿಸಲಾಗಿದೆ (ಈ ಮೊದಲು ದಿನಾಂಕ 31.07.2022 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು) ಹಾಗೂ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್ – ವಿಜಯಪುರ ಡೈಲಿ ಎಕ್ಸ್ಪ್ರೆಸ್ ಸ್ಪೆಷಲ್ ರೈಲಿನ ಸೇವೆಯನ್ನು 01.10.2022 ರವರೆಗೆ ವಿಸ್ತರಿಸಲಾಗಿದೆ (ಈ ಮೊದಲು ದಿನಾಂಕ 01.08.2022 ರವರೆಗೆ ಸಂಚರಿಸಲು ಸೂಚಿಸಲಾಗಿತ್ತು).
ಈ ಮೇಲಿನ ರೈಲುಗಳ ಸಮಯದಲ್ಲಿ, ನಿಲುಗಡೆ, ಬೋಗಿಗಳ ಸಂಯೋಜನೆ ಮತ್ತು ಸೇವೆಯ ದಿನಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.
ನನ್ನ ಉತ್ಸವ ಮಾಡೋದು ಬೇಡ, ಕಾಂಗ್ರೆಸ್, ದೇಶದ ಉತ್ಸವ ಮಾಡಿ: ಕಾರ್ಯಕರ್ತರಿಗೆ ಡಿ.ಕೆ ಶಿವಕುಮಾರ್ ಕಿವಿಮಾತು