ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 16,678 ಹೊಸ ಕೊರೋನಾ ಪ್ರಕರಣಗಳು ( Coronavirus Case ), 14,629 ಚೇತರಿಕೆಗಳು ಮತ್ತು 26 ಸಾವುಗಳು ವರದಿಯಾಗಿವೆ.
ಈ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ ಬಿಡುಗಡೆ ಮಾಡಿದ್ದು, ದೇಶದಲ್ಲಿ ಇಂದು ಹೊಸದಾಗಿ 16,678 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ವರದಿಯಿಂದ ದೃಢಪಟ್ಟಿದೆ. ಸೋಂಕಿತರಾದಂತ 14,629 ಜನರು ಗುಣಮುಖರಾಗಿದ್ದಾರೆ ಎಂದು ತಿಳಿಸಿದೆ.
BIGG NEWS: ಸಾಹಿತಿ ಬಿ.ಎಲ್ ವೇಣುಗೆ ಬೆದರಿಕೆ ಪತ್ರ: ಬಹಿರಂಗ ಕ್ಷಮೆಗೆ ಒತ್ತಾಯ
ಕಳೆದ 24 ಗಂಟೆಯಲ್ಲಿ ಕೋವಿಡ್ ( Covid19 ) ಕಾರಣದಿಂದಾಗಿ 26 ಜನರು ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ ಸಕ್ರಿಯ ಪ್ರಕರಣಗಳು 1,30,713 ಆಗಿವೆ. ದೈನಂದಿನ ಪಾಸಿಟಿವಿಟಿ ದರ 5.99% ಆಗಿದೆ ಎಂದು ತಿಳಿಸಿದೆ.
#COVID19 | India reports 16,678 fresh cases, 14,629 recoveries and 26 deaths in the last 24 hours.
Active cases 1,30,713
Daily positivity rate 5.99% pic.twitter.com/A2M7HQprWW— ANI (@ANI) July 11, 2022