ಕೊಲಂಬೋ: ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದಿದ್ದಂತ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘಿ ಅವರು ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಜೊತೆಗೆ ರಾಜೀನಾಮೆ ನೀಡಿದ್ದರು. ಈ ನಡುವೆಯೂ ಶ್ರೀಲಂಕಾದಲ್ಲಿ ಪ್ರತಿಭಟನೆ ಮುಂದುವರೆದಿತ್ತು. ಇದೀಗ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘಿ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿರೋದಾಗಿ ತಿಳಿದು ಬಂದಿದೆ.
BJP Karnataka: ಕೆ.ಜೆ.ಜಾರ್ಜ್ ರಾಜ್ಯ ಕಂಡ ಅತಿದೊಡ್ಡ ತೆರಿಗೆ ಕಳ್ಳರ ಪೈಕಿ ಒಬ್ಬರು – ಬಿಜೆಪಿ
ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ರಾಜೀನಾಮೆ ನೀಡಿ ಹೊಸ ಸರ್ಕಾರಕ್ಕೆ ದಾರಿ ಮಾಡಿಕೊಡಲು ಸಿದ್ಧರಿರುವುದಾಗಿ ರಾಜಕೀಯ ನಾಯಕರಿಗೆ ತಿಳಿಸಿದರು. ಈ ಮೂಲಕ ತಾವು ಶ್ರೀಲಂಕಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡೋ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ಬೆನ್ನಲ್ಲೇ ತಮ್ಮ ಪ್ರಧಾನಿ ಹುದ್ದೆಗೆ ರನಿಲ್ ವಿಕ್ರಮಸಿಂಘೆ ರಾಜೀನಾಮೆ ನೀಡಿದ್ದರು.
ಈ ಬೆನ್ನಲ್ಲೇ ಶ್ರೀಲಂಕಾದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವಂತ ಪ್ರತಿಭಟನಾಕಾರರು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘ ನಿವಾಸಕ್ಕೆ ಇದೀಗ ಬೆಂಕಿ ಹಚ್ಚಿರೋದಾಗಿ ತಿಳಿದು ಬಂದಿದೆ. ಪ್ರತಿಭಟನಾಕಾರರು ಹಚ್ಚಿದಂತ ಬೆಂಕಿಯಿಂದಾಗಿ, ಶ್ರೀಲಂಕಾ ರನಿಲ್ ವಿಕ್ರಮಸಿಂಘಿ ನಿವಾಸ ಧಗಧಗಿಸಿ ಹೊತ್ತಿ ಉರಿಯುತ್ತಿದೆ.
#SriLankaEconomicCrisis | Protesters have broken into the private residence of Sri Lankan Prime Minister Ranil Wickremesinghe and have set it on fire.
— ANI (@ANI) July 9, 2022