ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ( University ) 973 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ( Post of Assistant Professor ) ಖಾಲಿಯಿರೋದಾಗಿ ತಿಳಿದು ಬಂದಿದೆ. ಈ ಹುದ್ದೆಗಳಿಗೆ ಶೀಘ್ರವೇ ಕೆಇಎ ( KEA Recruitment ) ಮೂಲಕ ಅರ್ಜಿಯನ್ನು ಸಹ ಕರೆಯಲಾಗುತ್ತಿದೆ.
BREAKING NEWS: ಮಡಿಕೇರಿಯಲ್ಲಿ KSRTC ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ | KSRTC Bus Accident
ಈಗಾಗಲೇ ರಾಜ್ಯ ಸರ್ಕಾರದಿಂದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವಂತ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿಗೆ ( Assistant Professor Recruitment ) ಅನುಮೋದನೆ ನೀಡಲಾಗಿತ್ತು. ಆರ್ಧಿಕ ಇಲಾಖೆಯಿಂದ ಅನುಮತಿ ನೀಡಿದ ಬೆನ್ನಲ್ಲೇ, ಯಾವ ವಿವಿಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇದ್ದಾವೆ ಎನ್ನುವ ಮಾಹಿತಿಯನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಪಡೆಯಲಾಗಿದೆ.
ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ಈ ಮಾಹಿತಿಯ ಆಧಾರದಂತೆ ರಾಜ್ಯದ ವಿವಿಧ ವಿವಿಗಳಲ್ಲಿ ಒಟ್ಟು 973 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಭರ್ತಿಯಾಗದೇ ಖಾಲಿ ಇದ್ದಾವೆ ಎನ್ನಲಾಗಿದೆ.
ಯಾವ ವಿವಿಯಲ್ಲಿ ಎಷ್ಟು ಸಹಾಯಕ ಪ್ರಾಧ್ಯಪಾಕರ ಹುದ್ದೆ ಖಾಲಿ ಗೊತ್ತಾ.?
- ಬೆಂಗಳೂರು ವಿಶ್ವವಿದ್ಯಾಲಯ – 143
- ಕರ್ನಾಟಕ ವಿಶ್ವವಿದ್ಯಾಲಯ -172
- ಮೈಸೂರು ವಿಶ್ವವಿದ್ಯಾಲಯ – 208
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ – 27
- ವಿಶ್ವೇಶ್ವರಯ್ಯ ತಾಂತ್ರಿಕ ವಿವಿ – 34
- ದಾವಣಗೆರೆ ವಿವಿ -24
- ಗುಲ್ಬರ್ಗಾ ವಿವಿ – 98
- ರಾಣಿ ಚೆನ್ನಮ್ಮ ವಿವಿ – 06
- ಕರ್ನಾಟಕ ಜಾನಪದ ವಿವಿ – 09
- ವಿಜಯನಗರ ಶ್ರೀಕೃಷ್ಣದೇವರಾಯ ವಿವಿ -17
- ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿವಿ – 11
- ಕುವೆಂಪು ವಿವಿ -08
- ಮಂಗಳೂರು ವಿಶ್ವವಿದ್ಯಾಲಯ -53
- ತುಮಕೂರು ವಿವಿ – 59
- ಕರ್ನಾಟಕ ಸಂಸ್ಕೃತ ವಿವಿ – 03
- ಕನ್ನಡ ವಿವಿ – 09
ಈ ಮೇಲ್ಕಂಡ ವಿವಿಗಳಲ್ಲಿ ಖಾಲಿ ಇರುವಂತ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಕೆಇಎ ಮೂಲಕ ನೇಮಕಾತಿಗೆ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುತ್ತಿದೆ.