ಬೆಂಗಳೂರು : ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಗಗನಚುಂಬಿ ಕಟ್ಟಡಗಳಲ್ಲಿ ಬೆಂಕಿ ನಂದಿಸುವ ಲ್ಯಾಡರ್ ವಾಹನ ಬೆಂಗಳೂರಿಗೆ ಬಂದಿದೆ.
ಹೌದು, ಈ ವಾಹನದ ಮೂಲಕ 90 ಮೀಟರ್ ಎತ್ತರದವರೆಗಿನ ಕಟ್ಟಡಗಳಲ್ಲಿ ಬೆಂಕಿ ನಂದಿಸಬಹುದಾಗಿದೆ. ಈ ಏರಿಯಲ್ ಲ್ಯಾಡರ್ ಪ್ಲಾಟ್ಫಾರ್ಮ್ ಅನ್ನು ರಾಜ್ಯ ಅಗ್ನಿ ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೆ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಲೋಕಾರ್ಪಣೆ ಮಾಡಲಿದ್ದಾರೆ.
ರಾಜ್ಯ ಸರ್ಕಾರ ಸುಮಾರು 30 ಕೋಟಿ ವೆಚ್ಚದಲ್ಲಿ ಈ ವಾಹನವನ್ನು ಖರೀದಿಸಿದ್ದು, ಈ ವಾಹನವನ್ನು ಫಿನ್ಲೆಂಡ್ ದೇಶದಿಂದ ತರಿಸಲಾಗಿದೆಯಂತೆ. ನಾಳೆ ಈ ವಾಹನವನ್ನು ಸರ್ಕಾರ ಅಗ್ನಿಶಾಮಕ ಇಲಾಖೆಗೆ ಹಸ್ತಾಂತರಿಸಲಿದೆ. ಇದಕ್ಕೂ ಮೊದಲು ಮುಂಬೈ ನಗರದಲ್ಲಿ ಈ ವಾಹನವನ್ನು ಬಳಸಲಾಗುತ್ತಿತ್ತು, ಇದೀಗ ರಾಜ್ಯಕ್ಕೆ ಕಾಲಿಟ್ಟಿದೆ. ನಗರದಲ್ಲಿ ಹೆಚ್ಚುತ್ತಿರುವ ಗಗನಚುಂಬಿ ಕಟ್ಟಡಗಳ ಬೆಂಕಿ ನಂದಿಸಲು ಈ ವಾಹನವನ್ನು ಬಳಸಲಾಗುತ್ತದೆ.
BIGG NEWS : ಅ.28 ರಂದು ರಾಜ್ಯದ ಶಾಲೆಗಳಲ್ಲಿ ‘ಕೋಟಿ ಕಂಠ ಗಾಯನ’ : ಮೊಳಗಲಿದೆ ‘ಬಾರಿಸು ಕನ್ನಡ ಡಿಂಡಿಮವ’