ಹಾಸನ : ಅಪಘಾತದಲ್ಲಿ ( Hassan Accident ) ಮೃತಪಟ್ಟ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ( Minister K Gopalaiah ) ಹೇಳಿದರು.
ಜಿಲ್ಲೆಯ ಬಾಣಾವರ ಬಳಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದ ಒಂದೇ ಕುಟುಂಬದ 8 ಜನರ ಗ್ರಾಮವಾದ ಹಳ್ಳಿಕೆರೆ ಗ್ರಾಮಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಆಘಾತಕಾರಿ ವಿಷಯ. ತಮ್ಮ ಕುಟುಂಬಗಳಿಗೆ ಬೆಳಕಾಗಬೇಕಿದ್ದ 5 ಮಕ್ಕಳೂ ಕೂಡ ಮೃತರಾಗಿರುವುದು ಕೂಡ ಮನಸ್ಸಿಗೆ ತುಂಬಾ ವೇದನೆಯ ವಿಷಯ. ಇಂಥಹ ಕಷ್ಟ ಯಾರಿಗೂ ಬರಬಾರದು. ಈ ಕುಟುಂಬಗಳಿಗೆ ಸರ್ಕಾರ ಸ್ಪಂದಿಸುವ ಸಲುವಾಗಿ ಮೃತ ಪ್ರತಿಯೊಬ್ಬರ ಪರವಾಗಿ ತಲಾ 2 ಲಕ್ಷ ರೂಗಳನ್ನು ವಾರಸುದಾರರಿಗೆ ನೀಡಲಾಗುವುದು ಎಂದರು.
ಬಿಜೆಪಿ ಎಂದರೆ ಕಳ್ಳ, ಮಳ್ಳ, ಸುಳ್ಳರ ಪಕ್ಷ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? – ಕಾಂಗ್ರೆಸ್ ಪ್ರಶ್ನೆ
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೂ ಕೂಡ ಪರಿಹಾರ ನೀಡುವ ಸಂಬಂಧ ನಾಳಿನ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿತ ದೊಡ್ಡ ಅಪಘಾತವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ನಾಳೆ ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ಕೆ.ಗೋಪಾಲಯ್ಯ ಉತ್ತರಿಸಿದರು. ಈ ವೇಳೆ ಶಾಸಕ ಶಿವಲಿಂಗೇಗೌಡ ಇತರರು ಉಪಸ್ಥಿತರಿದ್ದರು.