ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೋನಾ ಆರ್ಭಟಿಸಿದೆ. ಇಂದು ಹೊಸದಾಗಿ 87 ಜನರಿಗೆ ಕೋವಿಡ್ ಪಾಸಿಟಿವ್ ಅಂತ ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 529ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಕಳೆದ 24 ಗಂಟೆಯಲ್ಲಿ ಆರ್ ಟಿ ಪಿಸಿಆರ್ ಮೂಲಕ 464, ರಾಟ್ ಮೂಲಕ 40 ಸೇರಿದಂತೆ 504 ಮಂದಿಯನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 87 ಜನರಿಗೆ ಪಾಸಿಟಿವ್ ಅಂತ ದೃಢಪಟ್ಟಿದೆ ಎಂದು ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 29 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸದ್ಯ 311 ಸಕ್ರೀಯ ಸೋಂಕಿತರಿದ್ದಾರೆ. ಇವರಲ್ಲಿ 297 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ, ಐವರು ಸರ್ಕಾರಿ, ನಾಲ್ವರು ಖಾಸಗಿ ಜನರಲ್ ಬೆಡ್ ನಲ್ಲಿ, ಇಬ್ಬರು ಐಸೋಲೋಷನ್ ಬೆಡ್ ನಲ್ಲಿ, ಐಸಿಯುನಲ್ಲಿ ಮೂವರು ಸೇರಿದಂತೆ 14 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದೆ.
BREAKING : ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ್ ಗೆ ಬಿಗ್ ಶಾಕ್ : ಗಡಿಪಾರು ನೋಟಿಸ್ ಜಾರಿ!