ದೆಹಲಿ: ಏಳನೇ ಕೇಂದ್ರೀಯ ವೇತನ ಆಯೋಗದ (CPC) ಪೇ ಮ್ಯಾಟ್ರಿಕ್ಸ್ ಮತ್ತು ವೇತನ ಮಟ್ಟಗಳಿಗೆ ಅನುಗುಣವಾಗಿ ತನ್ನ ಉದ್ಯೋಗಿಗಳ ಬಡ್ತಿಗಾಗಿ ಕನಿಷ್ಠ ಅರ್ಹತಾ ಸೇವೆಗಳ ನಿಯಮಗಳನ್ನ ಬದಲಾಯಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಈ ಪ್ರಕಟಣೆಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಸೆಪ್ಟೆಂಬರ್ 20 ರಂದು ಆಫೀಸ್ ಮೆಮೊರಾಂಡಮ್ (OM) ಮೂಲಕ ಮಾಡಲಾಗಿದೆ ಎಂದು ಫೈನಾನ್ಶಿಯಲ್ ಎಕ್ಸ್ಪ್ರೆಸ್ ವರದಿಯಲ್ಲಿ ತಿಳಿಸಿದೆ.
“ಪರಿಷ್ಕೃತ ಮಾನದಂಡಗಳನ್ನು ನೇಮಕಾತಿ ನಿಯಮಗಳಲ್ಲಿ/ಸೇವಾ ನಿಯಮಗಳಲ್ಲಿ/ಸೂಕ್ತ ತಿದ್ದುಪಡಿಗಳನ್ನು ಮಾಡುವ ಮೂಲಕ ಅಳವಡಿಸಿಕೊಳ್ಳಬಹುದು. ನಿಗದಿತ ಕಾರ್ಯವಿಧಾನವನ್ನು ಅನುಸರಿಸಿದ ನಂತರ ನೇಮಕಾತಿ ನಿಯಮಗಳು/ಸೇವಾ ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ಜಾರಿಗೆ ತರಲು ಎಲ್ಲಾ ಸಚಿವಾಲಯಗಳು/ಇಲಾಖೆಗಳನ್ನು ವಿನಂತಿಸಲಾಗಿದೆ” ಎಂದು ಡಿಒಪಿಟಿ ಹೇಳಿದೆ.
ಹೊಸ ನಿಯಮಗಳೇನು?
* ಹಂತ 1 ರಿಂದ ಹಂತ 2 ಕ್ಕೆ ಬಡ್ತಿ ಪಡೆಯಲು ಉದ್ಯೋಗಿಯು ಕನಿಷ್ಠ 3 ವರ್ಷಗಳ ಕಾಲ ಸೇವೆಸಲ್ಲಿಸಿರಬೇಕು.
* ಹಂತ 2 ರಿಂದ ಹಂತ 3 ರವರೆಗೆ 3 ವರ್ಷಗಳು, ಹಂತ 3 ರಿಂದ ಹಂತ 4 ರವರೆಗೆ 8 ವರ್ಷಗಳು, ಹಂತ 3 ರಿಂದ ಹಂತ 4 ಮತ್ತು ಹಂತ 4 ರಿಂದ ಹಂತ 5 ರವರೆಗೆ 5 ವರ್ಷಗಳ ಕಾಲ ಸೇವೆಸಲ್ಲಿಸಿರಬೇಕು.
* ಹಂತ 6 ರಿಂದ ಹಂತ 12 ಕ್ಕೆ ಬಡ್ತಿ ಪಡೆಯಲು ಉದ್ಯೋಗಿಯು ಕನಿಷ್ಠ 12 ವರ್ಷಗಳ ಅನುಭವದ ಅಗತ್ಯವಿದೆ.
* ಹಂತ 4 ರಿಂದ ಹಂತ 6 ರವರೆಗೆ, ಹಂತ 6 ರಿಂದ ಹಂತ 10, ಹಂತ 11 ರಿಂದ ಹಂತ 13 ರವರೆಗೆ ಅವಧಿಯು ತಲಾ 10 ವರ್ಷಗಳು ಮತ್ತು ಹಂತ 4 ರಿಂದ ಹಂತ 11 ಕ್ಕೆ 9 ವರ್ಷಗಳ ಅನುಭವದ ಅಗತ್ಯವಿದೆ.
BIGG NEWS : ಬೆಸ್ಕಾಂ ಗ್ರಾಹಕರಿಗೆ ಗುಡ್ ನ್ಯೂಸ್ : ಮನೆಗಳಿಗೆ `ಉಚಿತ ಡಿಜಿಟಲ್ ವಿದ್ಯುತ್ ಮೀಟರ್’ ಅಳವಡಿಕೆ
ತಮಿಳುನಾಡಿನಲ್ಲಿ RSS ಸದಸ್ಯನ ಮನೆಗೆ ಪೆಟ್ರೋಲ್ ಬಾಂಬ್ ಎಸೆದು ಎಸ್ಕೇಪ್ ಆದ ಅಪರಿಚಿತರು… ವಿಡಿಯೋ
BIG NEWS : ಭಾರತದಲ್ಲಿ 5G ಸೇವೆಗೆ ಅ. 1ರಂದು ಪ್ರಧಾನಿ ಮೋದಿ ಚಾಲನೆ | 5G services