ಶಾಂಘೈ(ಚೀನಾ): ಚೀನಾದಲ್ಲಿ ಏಕಾಏಕಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಈ ಮಧ್ಯೆ ಶಾಂಘೈ ನಗರದಲ್ಲಿ 70 ಪ್ರತಿಶತದಷ್ಟು ಜನರು ಕೊರೊನಾ ಸೋಂಕಿಗೆ ಒಳಗಾಗಿರಬಹುದು ಎಂದು ಶಾಂಘೈನ ಉನ್ನತ ಆಸ್ಪತ್ರೆಯೊಂದರ ಹಿರಿಯ ವೈದ್ಯರು ಹೇಳಿದ್ದಾರೆ ಎಂದು ರಾಜ್ಯ ಮಾಧ್ಯಮ ಮಂಗಳವಾರ ವರದಿ ಮಾಡಿದೆ.
ಕಳೆದ ತಿಂಗಳು ಚೀನಾದಲ್ಲಿ ಕಠಿಣ ಕೋವಿಡ್ ನಿಯಮಗಳ ವಿರುದ್ಧ ಜನರು ಬೃಹತ್ ಪ್ರತಿಭಟನೆ ನಡೆಸಿದ್ದರು. ಪರಿಣಾಮವಾಗಿ ಅಲ್ಲಿನ ಸರ್ಕಾರ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಿತ್ತು. ಇದಾದ ನಂತರ ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಹೆಚ್ಚಾಯಿತು.
ಕೋವಿಡ್ ಉಲ್ಬಣಗೊಳ್ಳುತ್ತಿದ್ದಂತೆ ಚೀನಾದಲ್ಲಿ ಆಸ್ಪತ್ರೆಗಳು, ಸ್ಮಶಾನಗಳು ತುಂಬಿ ತುಳುಕುವಂತಾಗಿದೆ. ಪ್ರತಿದಿನ ಲಕ್ಷಗಟ್ಟಲೇ ಪ್ರಕರಣಗಳು ವರದಿಯಾಗುತ್ತಿದ್ದು, ಅದೇ ಸಮಯದಲ್ಲಿ ಸಾವಿರಾರು ಜನರು ಕೊರೊನಾಗೆ ಬಲಿಯಾಗುತ್ತಿದ್ದಾರೆ ಎಂದು ವರದಿಯಾಗಿದೆ.
ಅಲ್ಲಿನ ರುಯಿಜಿನ್ ಆಸ್ಪತ್ರೆಯ ಉಪಾಧ್ಯಕ್ಷ ಮತ್ತು ಶಾಂಘೈನ ಕೋವಿಡ್ ತಜ್ಞರ ಸಲಹಾ ಸಮಿತಿಯ ಸದಸ್ಯರಾದ ಚೆನ್ ಎರ್ಜೆನ್, ನಗರದ 25 ಮಿಲಿಯನ್ ಜನರಲ್ಲಿ ಹೆಚ್ಚಿನವರು ಸೋಂಕಿಗೆ ಒಳಗಾಗಿರಬಹುದು ಎಂದು ಅಂದಾಜಿಸಿದ್ದಾರೆ.
ಈಗ ಶಾಂಘೈನಲ್ಲಿ ಸಾಂಕ್ರಾಮಿಕ ರೋಗದ ಹರಡುವಿಕೆಯು ತುಂಬಾ ವಿಸ್ತಾರವಾಗಿದೆ. ಇದು ಜನಸಂಖ್ಯೆಯ 70 ಪ್ರತಿಶತವನ್ನು ತಲುಪಿರಬಹುದು. ಇದು (ಏಪ್ರಿಲ್ ಮತ್ತು ಮೇನಲ್ಲಿ) 20 ರಿಂದ 30 ಪಟ್ಟು ಹೆಚ್ಚು ಎಂದು ಅವರು ಕಮ್ಯುನಿಸ್ಟ್ ಒಡೆತನದ ದಾಜಿಯಾಂಗ್ಡಾಂಗ್ ಸ್ಟುಡಿಯೊಗೆ ತಿಳಿಸಿದ್ದಾರೆ.
ಏಪ್ರಿಲ್ನಲ್ಲಿ ಶಾಂಘೈ ಎರಡು ತಿಂಗಳ ಲಾಕ್ಡೌನ್ ಅನ್ನು ಅನುಭವಿಸಿತ್ತು. ಈ ಸಮಯದಲ್ಲಿ6 ಲಕ್ಷಕ್ಕೂ ಅಧಿಕ ಹೆಚ್ಚು ನಿವಾಸಿಗಳು ಸೋಂಕಿಗೆ ಒಳಗಾಗಿದ್ದರು. ಅನೇಕರು ಸಾಮೂಹಿಕ ಸಂಪರ್ಕ ತಡೆ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು ಎನ್ನಲಾಗುತ್ತಿದೆ.
ಆದರೆ ಓಮಿಕ್ರಾನ್ ರೂಪಾಂತರವು ನಗರದಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, 2023 ರ ಆರಂಭದಲ್ಲಿ ಸೋಂಕುಗಳು ಉತ್ತುಂಗಕ್ಕೇರುತ್ತವೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಇತರೆ ನಗರಗಳಲ್ಲಿ ಕೋವಿಡ್ ಉಲ್ಬಣ
ಬೀಜಿಂಗ್, ಟಿಯಾಂಜಿನ್, ಚಾಂಗ್ಕಿಂಗ್ ಮತ್ತು ಗುವಾಂಗ್ಝೌ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ, ಅಲೆಯು ಈಗಾಗಲೇ ಉತ್ತುಂಗಕ್ಕೇರಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಶಾಂಘೈ ಆಸ್ಪತ್ರೆಯಲ್ಲಿ ಪ್ರತಿದಿನ 1,600 ತುರ್ತು ದಾಖಲಾತಿಗಳಾಗುತ್ತಿದ್ದು, ಅವರಲ್ಲಿ 80 ಪ್ರತಿಶತದಷ್ಟು ಕೋವಿಡ್ ರೋಗಿಗಳಿದ್ದಾರೆ. ಪ್ರತಿದಿನ 100 ಕ್ಕೂ ಹೆಚ್ಚು ಆಂಬ್ಯುಲೆನ್ಸ್ಗಳು ಆಸ್ಪತ್ರೆಗೆ ಆಗಮಿಸುತ್ತಿದ್ದು, ಹೆಚ್ಚಿನವರು 65 ವರ್ಷಕ್ಕಿಂತ ಮೇಲ್ಪಟ್ಟ ದುರ್ಬಲರಾಗಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.
ಫೋನ್ ನಲ್ಲಿ ‘ಪ್ರಧಾನಿ ಮೋದಿ’ ಧ್ವನಿ ಕೇಳುತ್ತಿದ್ದಂತೆ ಕೈ ಮುಗಿದಿದ್ದ ‘ಸಿದ್ದೇಶ್ವರ ಶ್ರೀ’ಗಳು
BIGG NEWS: ಸಿದ್ದೇಶ್ವರ ಸ್ವಾಮೀಜಿ ತಂಗುತ್ತಿದ್ದ ತಪೋವನದಲ್ಲಿ ನಿರವಮೌನ