ಬಿಹಾರ : ಬಿಹಾರದ ಗಂಗಾ ಮತ್ತು ಅದರ ಉಪನದಿಗಳ ಸಂಗಮ ಸ್ಥಳದಲ್ಲಿ ದೋಣಿ ಮುಳುಗಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಕಟಿಹಾರ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಉದಯನ್ ಮಿಶ್ರಾ ಅವರ ಪ್ರಕಾರ, 10 ಜನರು, ಎಲ್ಲಾ ಕೃಷಿ ಕಾರ್ಮಿಕರು ಕೆಲಸದಿಂದ ಹಿಂದಿರುಗುತ್ತಿದ್ದ ವೇಳೆ ದೋಣಿ ಗಂಗಾ ಮತ್ತು ಬರಂಡಿ ಸಂಗಮದಲ್ಲಿ ಮುಳುಗಿದೆ. ಕೂಡಲೇ ಮೂವರು ಸುರಕ್ಷಿತವಾಗಿ ಈಜಿ ದಡ ಸೇರಿದರು ಆದರೆ ಉಳಿದ ಏಳು ಜನರು ಕಾಣೆಯಾಗಿದ್ದಾರೆ ಎಂದು ಹೇಳಿದರು.
ಸ್ಥಳೀಯ ಮುಳುಗುತಜ್ಞರು ಮತ್ತು ಎನ್ ಡಿ ಆರ್ ಎಫ್ ಸಿಬ್ಬಂದಿಯ ಸಹಾಯದಿಂದ ನಿನ್ನೆ ರಾತ್ರಿಯಿಡೀ ನಡೆದ ಶೋಧ ಕಾರ್ಯಾಚರಣೆಯ ನಂತರ ಅವರ ದೇಹಗಳನ್ನು ಹೊರತೆಗೆಯಲಾಯಿತು ಎಂದು ಅವರು ಹೇಳಿದರು. ಇದರ ನಡುವೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, 4 ಲಕ್ಷ ಪರಿಹಾರವನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.