ಪೋರ್ಟ್ ಮೊರೆಸ್ಬಿ (ಪಾಪುವಾ ನ್ಯೂಗಿನಿಯಾ): ಪಪುವಾ ನ್ಯೂಗಿನಿಯಾದಲ್ಲಿ ಶನಿವಾರ ರಾತ್ರಿ 11: 46 (GMT) ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 7.6 ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.
ಪಪುವಾ ನ್ಯೂಗಿನಿಯಾದ ಕೈನಾಂಟುವಿನ ಪೂರ್ವದಲ್ಲಿ 67 ಕಿಮೀ ದೂರದಲ್ಲಿ ಹಾಗೂ ಭೂಮಿ ಮೇಲಿಂದ 61.4 ಕಿ.ಮೀ ಆಳದಲ್ಲಿ ಕಂಪನ ದಾಖಲಾಗಿದೆ.
ಸದ್ಯಕ್ಕೆ ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಪಪುವಾ ನ್ಯೂಗಿನಿಯಾವು ಪೆಸಿಫಿಕ್ ಮಹಾಸಾಗರದ ಜಲಾನಯನ ಪ್ರದೇಶದಲ್ಲಿ “ರಿಂಗ್ ಆಫ್ ಫೈರ್” ನಲ್ಲಿದೆ. ಇದು ಆಗಾಗ್ಗೆ ಭೂಕಂಪಗಳು ಮತ್ತು ಜ್ವಾಲಾಮುಖಿ ಸ್ಫೋಟಗಳಿಗೆ ಗುರಿಯಾಗುತ್ತದೆ.
BIG NEWS: ಕಾಬೂಲ್ನಲ್ಲಿ ತರಬೇತಿ ವೇಳೆ ʻಯುಎಸ್ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ʼ ಪತನ, ಮೂವರು ಸಾವು