ಮಂಡ್ಯ: ರಾಜ್ಯಾಧ್ಯಂತ ಕಳೆದ ಜೂನ್ 1 ರಿಂದ ಆಗಸ್ಟ್ 4ರ ಇಂದಿನವರೆಗೆ ಸುರಿದಂತ ಭಾರೀ ಮಳೆಯಿಂದಾಗಿ ( Heavy Rain ), ಬಹುದೊಡ್ಡ ಅವಾಂತರವನ್ನೇ ಸೃಷ್ಠಿಸಿದೆ. ವರುಣನ ಆರ್ಭಟದಿಂದಾಗಿ ರಾಜ್ಯದ 14 ಜಿಲ್ಲೆಗಳ ಜನರು ತೊಂದರೆಗೆ ಸಿಲುಕಿದ್ದಾರೆ. ರಾಜ್ಯದಲ್ಲಿ 608 ಮನೆ, 299 ರಸ್ತೆ, 4,224 ಶಾಲೆಗಳಿಗೆ ಹಾನಿಗೊಂಡಿರೋದಾಗಿ ಕಂದಾಯ ಸಚಿವ ಆರ್ ಅಶೋಕ್ ( Revenue Minister R Ashok ) ತಿಳಿಸಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಭಾರೀ ಮಳೆಯಿಂದ ಅವಾಂತರ ಹಿನ್ನಲೆಯಲ್ಲಿ ಕೆ ಆರ್ ಪೇಟೆಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜೂನ್ 1ರಿಂದ ಆಗಸ್ಟ್ 4, 2022ರವರೆಗೆ ರಾಜ್ಯದ 14 ಜಿಲ್ಲೆಯಲ್ಲಿ ಮಳೆಯ ಅವಾಂತರ ಉಂಟಾಗಿದೆ. 64 ಜನರು ಸಾವನ್ನಪ್ಪಿದ್ದಾರೆ. 1,4,956 ಜನರು ಪ್ರವಾಹ ಪೀಡಿತರಾಗಿದ್ದಾರೆ ಎಂದು ಮಾಹಿತಿ ನೀಡಿದರು.
BIG BREAKING NEWS: ವಿಧಾನಪರಿಷತ್ ಒಂದು ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ಅವಿರೋಧವಾಗಿ ಆಯ್ಕೆ
ಇನ್ನೂ ವರುಣನ ಆರ್ಭಟದಿಂದಾಗಿ 608 ಮನೆಗಳು ಸಂಪೂರ್ಣ ನಾಶ, 2,450 ಮನೆ ಭಾಗಶಹ ಹಾನಿಗೊಂಡಿವೆ. ಈವರೆಗೆ ನೆರೆಯಲ್ಲಿ ಸಿಲುಕಿದ್ದಂತ 8,057 ಜನರು ರಕ್ಷಣೆ ಮಾಡಲಾಗಿದೆ. 6933 ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯಪಡೆದಿದ್ದಾರೆ ಎಂದು ಹೇಳಿದರು.
BIGG NEWS: ಮಂಡ್ಯದಲ್ಲಿ ಭಾರಿ ಮಳೆ: ರಂಗನತಿಟ್ಟು ಪಕ್ಷಿಧಾಮಕ್ಕೆ ಪ್ರವಾಹ ಭೀತಿ; ಪ್ರವಾಸಿಗರಿಗೆ ನಿಷೇಧ
ಮಳೆಯಿಂದಾಗಿ 1,8,280 ಹೆಕ್ಟೇರ್ ಬೆಳೆ ನಾಶವಾಗಿದೆ. 4,500 ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶಗೊಂಡಿದೆ. 1,392 ಕಿಲೋಮೀಟರ್ ರಸ್ತೆ ಹಾನಿಗೊಂಡಿದೆ. 61 ಕೆರೆಗಳು ಹಾನಿಗೊಂಡಿವೆ. 299 ಸೇತುವೆಗಳು, 4224 ಶಾಲೆಗಳಿಗೆ ತೊಂದರೆಯಾಗಿರೋದಾಗಿ ತಿಳಿಸಿದರು.