ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿದಂತ ಭಾರೀ ಮಳೆಯಿಂದಾಗಿ ( Bengaluru Rain ) ನಗರದಲ್ಲಿನ 600 ಮನೆಗಳು, 130 ಅಪಾರ್ಮೆಂಟ್ ಗಳಿಗೆ ಜಲಾಘಾತ ನೀಡಲಾಗಿದೆ. ಈ ಪರಿಣಾಮ 4,500 ಕುಟುಂಬಗಳು ಬೀದಿಗೆ ಬಿದ್ದು ಕಂಗಾಲಾಗಿರುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಅದರಲ್ಲೂ ಮಹದೇವಪುರ ವಲಯ, ಬೆಳ್ಳಂದೂರು, ಯಮಲೂರು, ವರ್ತೂರು, ಸರ್ಜಾಪುರ, ಜುನ್ನಸಂದ್ರ, ಮಾರತಹಳ್ಳಿ, ಹಾಲನಾಯಕನಹಳ್ಳಿ, ದೊಡ್ಡನೆಕ್ಕುಂದಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿಯೇ 600 ಮನೆಗಳು ಮತ್ತು 130 ಅಪಾರ್ಮೆಂಟ್ ಗಳು ಪ್ರವಾಹಕ್ಕೆ ಸಿಲುಕಿವೆ. ಇಲ್ಲಿ ನೆರೆಯಿಂದಾಗಿ ಸಂತ್ರಸ್ತರಾದಂತವರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸೋ ಕಾರ್ಯಾಚರಣೆ ಮಾಡಲಾಗುತ್ತಿದೆ.
ಬಿಜೆಪಿ ‘ಜನೋತ್ಸವ ಕಾರ್ಯಕ್ರಮ’ದ ಹೆಸರು ‘ಜನಸ್ಪಂದನ’ವಾಗಿ ಬದಲು: ಸೆ.10ರ ‘ಶನಿವಾರ’ದಂದು ಕಾರ್ಯಕ್ರಮ ಫಿಕ್ಸ್
ಇನ್ನೂ ಬೆಂಗಳೂರಿನಲ್ಲಿ ಪ್ರವಾಹದಿಂದಾಗಿ ಸಂತ್ರಸ್ತರಾದಂತ 10 ಸಾವಿರಕ್ಕೂ ಹೆಚ್ಚು ಜನರಿಗೆ ಕಳೆದ 2 ದಿನಗಳಿಂದ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಬಿಬಿಎಂಪಿಯ ಮೂಲಕ ಊಟ ಸರಬರಾಜು ಮಾಡಲಾಗುತ್ತಿದೆ. ನೆರೆಯಿಂದಾಗಿ ಜಲಾವೃತಗೊಂಡಿರುವಂತ ಸ್ಥಳಗಳಲ್ಲಿ ನೀರು ಹೊರ ಹಾಕುವಂತ ಕಾರ್ಯ ಮುಂದುವರೆದಿದೆ.