ಝಾರ್ಸುಗುಡ (ಒಡಿಶಾ): ಕಲ್ಲಿದ್ದಲು ತುಂಬಿದ ಟ್ರಕ್ವೊಂದು ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದ ಝಾರ್ಸುಗುಡ-ಸಂಬಲ್ಪುರ್ ಬಿಜು ಎಕ್ಸ್ಪ್ರೆಸ್ವೇನಲ್ಲಿ ಶುಕ್ರವಾರ ನಡೆದಿದೆ.
ಮಾಹಿತಿ ಪ್ರಕಾರ, ಜಾರ್ಸುಗುಡ ಬೈಪಾಸ್ ರಸ್ತೆಯ ಪವರ್ ಹೌಸ್ ಚಾಕ್ ಬಳಿ ಕಲ್ಲಿದ್ದಲು ತುಂಬಿದ ಟ್ರಕ್ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಬಸ್ ಜೆಎಸ್ಡಬ್ಲ್ಯು ಸ್ಥಾವರದಿಂದ ಜಾರ್ಸುಗುಡ ಪಟ್ಟಣಕ್ಕೆ ನೌಕರರನ್ನು ಹೊತ್ತೊಯ್ಯುತ್ತಿತ್ತು. ಮೃತರು ಸ್ಥಾವರದಲ್ಲಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಗಾಯಾಳುಗಳನ್ನು ಸಂಬಲ್ಪುರದ ಬುರ್ಲಾದಲ್ಲಿರುವ ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (ವಿಮ್ಸಾರ್) ಸ್ಥಳಾಂತರಿಸಲಾಗಿದೆ. ಸಾವಿನ ಇನ್ನೂ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BIGG NEWS : ಕರ್ನಾಟಕ ಬಯಲಾಟ ಅಕಾಡೆಮಿ ವಿವಿಧ ಪ್ರಶಸ್ತಿ ಪ್ರಕಟ : ಇಲ್ಲಿದೆ ಸಂಪೂರ್ಣ ಪಟ್ಟಿ
BIG NEWS : Johnson & Johnson’s ಬೇಬಿ ಪೌಡರ್ ತಯಾರಿಕಾ ಪರವಾನಗಿ ರದ್ದುಗೊಳಿಸಿದ ಮಹಾರಾಷ್ಟ್ರ…?
BIGG NEWS : `ಗ್ರಾಮ ವಿದ್ಯುತ್ ಪ್ರತಿನಿಧಿ’ಗಳಿಗೆ ಗುಡ್ ನ್ಯೂಸ್ : ಶೀಘ್ರವೇ ಸೇವೆ ಕಾಯಂ