ತೆಲಂಗಾಣ: ತೆಲಂಗಾಣದ ಮೇಡ್ಚಲ್-ಮಲ್ಕಾಜ್ಗಿರಿ ಜಿಲ್ಲೆಯ ಜವಾಹರನಗರ ಪೊಲೀಸ್ ವ್ಯಾಪ್ತಿಯ ಮಲ್ಕರಂ ನದಿಯಲ್ಲಿ ಶನಿವಾರ ಐದು ಮಕ್ಕಳು ಸೇರಿದಂತೆ ಆರು ಜನರು ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಮಕ್ಕಳನ್ನು ಜಾಫರ್, ಇಸ್ಮಾಯಿಲ್, ರೆಹಾನ್, ಅಯಾನ್ ಮತ್ತು ಸೊಹೈಲ್, ಕ್ಷಕ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ. ಶಿಕ್ಷಕ ಮತ್ತು ಮಕ್ಕಳೆಲ್ಲರೂ ಮಲ್ಕರಂ ಪ್ರದೇಶದಲ್ಲಿ ತಮ್ಮ ಶಿಕ್ಷಕರ ಗೃಹಪ್ರವೇಶ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಕಾರ್ಯಕ್ರಮ ಮುಗಿದ ನಂತರ ಮಕ್ಕಳು ಸಮೀಪದ ಮಲ್ಕರಂ ನದಿಯಲ್ಲಿ ಆಡಲು ನೀರಿಗೆ ಇಳಿದಿದ್ದಾರೆ. ಈಜು ಬಾರದ ಅವರು ನೀರಿನಲ್ಲಿ ಮುಳುಗಲು ಪ್ರಾಂಭಿಸಿದರು. ಇದನ್ನು ಕಂಡ ಶಿಕ್ಷಕ ಅಬ್ದುಲ್ ರೆಹಮಾನ್ ಅವರನ್ನು ರಕ್ಷಿಸಲು ಹೋಗಿ ಅವರೂ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಎಲ್ಲಾ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BIG NEWS : ಇಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ
BIG NEWS : ಇಂದು 6 ರಾಜ್ಯಗಳ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ | Bypolls results 2022
BIGG NEWS : ಕರ್ನಾಟಕದಲ್ಲಿ ಜಾನುವಾರು ಸಾಗಣೆಗೆ ಆನ್ಲೈನ್ ಪಾಸ್ ಪರ್ಮಿಟ್ ಕಡ್ಡಾಯ
BIG NEWS : ಇಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ