ಭೋಪಾಲ್: ಐದು ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ತನ್ನ ತಾಯಿಯ ಮಡಿಲಲ್ಲೇ ಪ್ರಾಣ ಬಿಟ್ಟ ಮನಕಲುಕುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಂಜಯ್ ಪಾಂಡ್ರೆ ಮತ್ತು ಅವರ ಕುಟುಂಬದವರು ಪುಟ್ಟ ರಿಷಿಯ ಅನಾರೋಗ್ಯದ ಕಾರಣ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಆದ್ರೆ, ಆಸ್ಪತ್ರೆ ಆವರಣದಲ್ಲಿ ಗಂಟೆಗಟ್ಟಲೆ ಕಾದು ಕುಂತರೂ ಒಬ್ಬ ವೈದ್ಯ ಅಥವಾ ವೈದ್ಯಾಧಿಕಾರಿಯೂ ಅಸ್ವಸ್ಥಗೊಂಡ ಮಗುವಿಗೆ ಚಿಕಿತ್ಸೆ ನೀಡಲಿಲ್ಲ. ಇದರಿಂದಾಗಿ ಮಗು ತಾಯಿಯ ಮಡಿಲಲ್ಲೇ ಕೊನೆಯುಸಿರೆಳೆದಿದೆ.
ಈ ಘಟನೆಯು ರಾಜ್ಯದಲ್ಲಿನ ಕಳಪೆ ಆರೋಗ್ಯ ಮೂಲಸೌಕರ್ಯಗಳ ದೂರುಗಳನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಮಗು ಸಾವನ್ನಪ್ಪಿದ ಗಂಟೆಗಳ ನಂತರವೂ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾದ ವೈದ್ಯರಾಗಲಿ ಅಥವಾ ವೈದ್ಯಾಧಿಕಾರಿಯಾಗಲಿ ಲಭ್ಯವಿಲ್ಲ ಎಂದು ಕುಟುಂಬ ಆರೋಪಿಸಿದೆ.
BIGG NEWS: ಅಬುಧಾಬಿಯ ಮೊದಲ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್