ಗದಗ : ರಾಜ್ಯದಲ್ಲಿ ಇದೀಗ ದಿನದಿಂದ ದಿನಕ್ಕೆ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದರಿಂದ ಸಹಜವಾಗಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಕಳೆದ ಒಂದು ವಾರಗಳಿಂದ ರಾಜ್ಯದಲ್ಲಿ 7ಕ್ಕೂ ಹೆಚ್ಚು ಮಕ್ಕಳು ಡೆಂಗ್ಯೂ ಸೋಕಿನಿಂದ ಸಾವನಪ್ಪಿದ್ದಾರೆ. ಗದಗದಲ್ಲಿ ಡೆಂಗ್ಯೂ ಗೆ 5 ವರ್ಷದ ಬಾಲಕ ಚಿರಾಯಿ ಸಾವನಪ್ಪಿದ್ದಾನೆ. ಇದೀಗ ಈ ಒಂದು ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
ಹೌದು ಮಗು ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಮೃತ ಚಿರಾಯಿ ಪೋಷಕರು ಆರೋಪಿಸಿದ್ದಾರೆ. ಬೆಡ್ ಇಲ್ಲದೆ 2 ಗಂಟೆ ಕಾಲ ಮಗು ನರಳಾಡಿದೆ. ತಂದೆ ಮಂಜುನಾಥ ತಾಯಿ ಸುಜಾತ ಈ ಒಂದು ಆರೋಪ ಮಾಡುತ್ತಿದ್ದಾರೆ. ದಾಖಲಿಸಿಕೊಳ್ಳಲು ಜಿಮ್ಸ್ ವೈದ್ಯರು ಹಿಂದೇಟು ಹಾಕಿದ್ದರು. ನಮ್ಮಲ್ಲಿ ಬೆಡ್ ಇಲ್ಲ ಬೇರೆ ಕಡೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರು.
ಇದಾದ ಬಳಿಕ ಪೋಷಕರು ತಡವಾಗಿ ಅಡ್ಮಿಟ್ ಮಾಡಿಕೊಂಡರೂ ಕೂಡ ಸರಿಯಾಗಿ ಚಿಕಿತ್ಸೆಯನ್ನು ಕೂಡ ಕೊಟ್ಟಿಲ್ಲ. ಸರಿಯಾದ ಚಿಕಿತ್ಸೆ ನೀಡಲಿಲ್ಲ. ಆಕ್ಸಿಜನ್ ನೀಡದೆ ನಿರ್ಲಕ್ಷ ಮಾಡಿದ್ದಾರೆ. ತಜ್ಞ ವೈದ್ಯರು ಬಂದು ಮಗುವಿಗೆ ಚಿಕಿತ್ಸೆ ನೀಡಿಲ್ಲ ಎಂದು ತಂದೆ ಮಂಜುನಾಥ್ ಹಾಗೂ ತಾಯಿ ಸುಜಾತ ಇದೀಗ ವೈದ್ಯರ ಹಾಗೂ ಆಸ್ಪತ್ರೆಯ ವಿರುದ್ಧ ಆರೋಪ ಮಾಡುತ್ತಿದ್ದಾರೆ.