ಸಿಯೋಲ್ : ದಕ್ಷಿಣ ಕೊರೊಯಾದ ಸಿಯೋಲ್ನಿಂದ ಆಗ್ನೇಯಕ್ಕೆ 50 ಕಿಮೀ ದೂರದಲ್ಲಿರುವ ಇಚಿಯಾನ್ನಲ್ಲಿರುವ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, 37 ಮಂದಿ ಗಾಯಗೊಂಡಿದ್ದಾರೆ.
ನಾಲ್ಕು ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯಲ್ಲಿರುವ ಡಯಾಲಿಸಿಸ್ ಆಸ್ಪತ್ರೆಯಲ್ಲಿ ಬೆಳಗ್ಗೆ 10.17 ಗಂಟೆಗೆ (ಸ್ಥಳೀಯ ಕಾಲಮಾನ) ಬೆಂಕಿ ಕಾಣಿಸಿಕೊಂಡಿದ್ದು, 33 ರೋಗಿಗಳು ಸೇರಿದಂತೆ 46 ಜನರು ತಂಗಿದ್ದರು ಎಂದು ಯೋನ್ಹಾಪ್ ನ್ಯೂಸ್ ಏಜೆನ್ಸಿ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದ ಮೂವರು ಮತ್ತು ಇಬ್ಬರು ರೋಗಿಗಳು ನಾಲ್ಕನೇ ಮಹಡಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ 21 ಅಗ್ನಿಶಾಮಕ ವಾಹನಗಳು, 51 ಸಿಬ್ಬಂದಿ ಆಗಮಿಸಿದ್ದು, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಆದಾಗ್ಯೂ ಬೆಂಕಿ ಎಲ್ಲಿ ಮತ್ತು ಏಕೆ ಪ್ರಾರಂಭವಾಯಿತು ಎಂಬುದನ್ನು ನಿಖರವಾಗಿ ನಿರ್ಧರಿಸಲು ತನಿಖೆಯ ಅಗತ್ಯವಿದೆ.
ಕಟ್ಟಡವು ಓರಿಯೆಂಟಲ್ ವೈದ್ಯಕೀಯ ಚಿಕಿತ್ಸಾಲಯ ಮತ್ತು ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಕಚೇರಿಗಳನ್ನು ಮತ್ತು ಮೊದಲ ಮಹಡಿಯಲ್ಲಿ ರೆಸ್ಟೋರೆಂಟ್ಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.