ಬೆಂಗಳೂರು: ರಾಜ್ಯದಲ್ಲಿ ಇಂದು 48 ಜನರಿಗೆ ಕೊರೋನಾ ಪಾಸಿಟಿವ್ ( Corona Positive ) ಎಂಬುದಾಗಿ ದೃಢಪಟ್ಟಿದೆ. ಸೋಂಕಿನಿಂದಾಗಿ ಓರ್ವ ಸಾವನ್ನಪ್ಪಿದ್ದಾರೆ. ಅಲ್ಲದೇ 127 ಸೋಂಕಿತರು ಗುಣಮುಖರಾಗಿದ್ದಾರೆ.
ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ( Karnataka Health Department ) ವರದಿ ಬಿಡುಗಡೆ ಮಾಡಿದ್ದು ಕಳೆದ 24 ಗಂಟೆಯಲ್ಲಿ 5750 ಮಂದಿಯನ್ನು ಕೋವಿಡ್ ಸೋಂಕು ( Covid19 Case ) ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದಿದೆ.
ಇಂದು ಬೆಂಗಳೂರು ಗ್ರಾಮಾಂತರ 02, ಬೆಂಗಳೂರು ನಗರ 30, ಚಿಕ್ಕಮಗಳೂರು 01, ಧಾರವಾಡ ಮತ್ತು ಗದಗ ತಲಾ ಇಬ್ಬರು, ಕೊಪ್ಪಳ, ಮಂಡ್ಯ, ರಾಮನಗರ ಮತ್ತು ಉಡುಪಿ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ, ಮೈಸೂರು 04 ಹಾಗೂ ವಿಜಯನಗರದಲ್ಲಿ 03 ಕೇಸ್ ಸೇರಿದಂತೆ 48 ಜನರಿಗೆ ಕೊರೋನಾ ದೃಢಪಟ್ಟಿದೆ ಎಂದಿದೆ.
ಕಳೆದ 24 ಗಂಟೆಯಲ್ಲಿ 127 ಸೋಂಕಿತರು ಗುಣಮುಖರಾಗಿದ್ದಾರೆ. ಕಲಬುರ್ಗಿಯಲ್ಲಿ 54 ವರ್ಷದ ಮಹಿಳೆ ಜ.22ರಂದು ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ, ಜ.23ರ ಇಂದು ಚಿಕಿತ್ಸೆ ಫಲಿಸದೋ ಸಾವನ್ನಪ್ಪಿರೋದಾಗಿ ತಿಳಿಸಿದೆ.
ಕರ್ನಾಟಕ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ದೇಶದಲ್ಲೇ 3ನೇ ಸ್ಥಾನ – ಸಚಿವ ಎಸ್.ಎಸ್ ಮಲ್ಲಿಕಾರ್ಜುನ್