ಉತ್ತರಾಖಂಡ : ಭೂಕುಸಿತದಿಂದ ಬೃಹತ್ ಬಂಡಗಳು ಮೂರು ಮನೆಗಳ ಮೇಲೆ ಅಪ್ಪಳಿಸಿದ್ದು, ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಥರಾಲಿ ತೆಹಸಿಲ್ನ ಪೈಂಗರ್ ಗ್ರಾಮದಲ್ಲಿ ನಡೆದಿದೆ.
BIGG NEWS ; ‘ಕೇಂದ್ರ ಸರ್ಕಾರ’ ಮಹತ್ವದ ಕ್ರಮ ; ‘ನಕಲಿ ಕಸ್ಟಮರ್ ಕೇರ್ ನಂಬರ್’ಗೆ ಕಡಿವಾಣ, ಯೋಜನೆ ಸಿದ್ಧ.!
ಮೃತರನ್ನು ಬಚುಲಿ ದೇವಿ (75), ಸುನಿತಾ ದೇವಿ (37), ದೇವಾನಂದ್ (57) ಮತ್ತು ಘನಾನಂದ್ (45) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಯೋಗೇಶ್ ಎಂದು ಗುರುತಿಸಲಾದ 15 ವರ್ಷದ ಬಾಲಕನನ್ನು ಉನ್ನತ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಡಿಆರ್ಎಫ್ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ರಕ್ಷಣಾ ತಂಡಗಳು ಆರಂಭದಲ್ಲಿ ಅವಶೇಷಗಳಡಿ ಸಿಲುಕಿದ್ದ ದೇಹವನ್ನು ಹೊರತೆಗೆದು ನಾಲ್ವರು ಗಾಯಾಳುಗಳನ್ನು ಸಿಎಚ್ಸಿ ಥರಾಲಿಗೆ ರವಾನಿಸಿದ್ದು, ಚಿಕಿತ್ಸೆ ವೇಳೆ ಮೂವರು ಮೃತಪಟ್ಟಿದ್ದಾರೆ. ಉಳಿದವರನ್ನು ಉನ್ನತ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ (ಚಮೋಲಿ) ನಂದ ಕಿಶೋರ್ ಜೋಶಿ ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಈ ರೀತಿಯ ಘಟನೆಗಳು ವರದಿಯಾಗುತ್ತಿರುತ್ತವೆ. ಕಳೆದ ಸೆಪ್ಟೆಂಬರ್ 17 ರಂದು ನೈನಿತಾಲ್ ಜಿಲ್ಲೆಯಲ್ಲಿ ಕಾರಿನ ಮೇಲೆ ಬಂಡೆ ಉರುಳಿಬಿದ್ದು ಮೂವರು ಗಾಯಗೊಂಡಿದ್ದರು.
ಜೂನ್ 29 ರಂದು, ಚಮೋಲಿ ಜಿಲ್ಲೆಯಲ್ಲಿ ಬದರಿನಾಥ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಯಾತ್ರಾರ್ಥಿಗಳ ಕಾರಿನ ಮೇಲೆ ಬಂಡೆಯೊಂದು ಬಿದ್ದಿದ್ದರಿಂದ ಒಬ್ಬರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು.