ಐಜ್ವಾಲ್(ಮಿಜೋರಾಂ): ಮಿಜೋರಾಂನ ಐಜ್ವಾಲ್ ಜಿಲ್ಲೆಯಲ್ಲಿ ಶನಿವಾರ ಸಂಜೆ ಪೆಟ್ರೋಲ್ ಟ್ಯಾಂಕರ್ಗೆ ಬೆಂಕಿ ತಗುಲಿ ಸ್ಫೋಟಗೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ರಾಜ್ಯ ರಾಜಧಾನಿಯಿಂದ ಪೂರ್ವಕ್ಕೆ 18 ಕಿಲೋಮೀಟರ್ ದೂರದಲ್ಲಿರುವ ತುಯಿರಿಯಾಲ್ ಗ್ರಾಮದಲ್ಲಿ ನಿನ್ನೆ ಸಂಜೆ 6 ಗಂಟೆಗೆ ಟ್ಯಾಂಕರ್ ಚಂಫೈಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
Mizoram | At least 4 people died & 10 others injured in a fire incident in Tuirial, Aizawl district, after a tanker carrying petrol caught fire. More details awaited
“A four-wheeler taxi & two 2-wheelers got damaged in the incident,” Aizawl SP C Lalruaia pic.twitter.com/7i0aDNPoGC
— ANI (@ANI) October 29, 2022
ಚಂಫೈಗೆ ಹೋಗುತ್ತಿದ್ದ ಟ್ಯಾಂಕರ್ನಿಂದ ಪೆಟ್ರೋಲ್ ಸೋರುತ್ತಿತ್ತು. ಅದನ್ನು ಸಂಗ್ರಹಿಸಲು ಸ್ಥಳೀಯರು ಯತ್ನಿಸಿದಾಗ ಟ್ಯಾಂಕರ್ಗೆ ಬೆಂಕಿ ತಗುಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ನಾಲ್ವರು ಸುಟ್ಟು ಕರಕಲಾಗಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಅವರುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BIG NEWS: ಇಂದು ಬೆಳಗ್ಗೆ 11 ಗಂಟೆಗೆ ʻಮನ್ ಕೀ ಬಾತ್ʼನಲ್ಲಿ ಪ್ರಧಾನಿ ಮೋದಿ ಮಾತು | Mann Ki Baat
BIG NEWS: ʻದೇಶದ ಯುವಕರಿಗೆ 10 ಲಕ್ಷ ಉದ್ಯೋಗಗಳನ್ನು ಒದಗಿಸಲು ಕೇಂದ್ರ ಶ್ರಮಿಸುತ್ತಿದೆʼ: ಪ್ರಧಾನಿ ಮೋದಿ
BIG NEWS: ಇಂದು ಬೆಳಗ್ಗೆ 11 ಗಂಟೆಗೆ ʻಮನ್ ಕೀ ಬಾತ್ʼನಲ್ಲಿ ಪ್ರಧಾನಿ ಮೋದಿ ಮಾತು | Mann Ki Baat