ಇಟಾವಾ (ಉತ್ತರಪ್ರದೇಶ): ಭಾರೀ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾವಾದ ಸಿವಿಲ್ ಲೈನ್ ಪ್ರದೇಶದ ಚಂದ್ರಾಪುರ ಗ್ರಾಮದಲ್ಲಿ ಇಂದು ನಡೆದಿದೆ.
ಈ ನಾಲ್ವರು ಒಡಹುಟ್ಟಿದವರಾಗಿದ್ದಾರೆ. ಮೃತರನ್ನು ಸಿಂಕು (10), ಅಭಿ (8), ಸೋನು (7), ಆರತಿ (5) ಎಂದು ಗುರುತಿಸಲಾಗಿದೆ. ಕುಟುಂಬಕ್ಕೆ ನಿಯಮಾನುಸಾರ ಪರಿಹಾರವನ್ನು ನೀಡಲಾಗುವುದು ಎಂದು ಇಟಾವಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವ್ನಿಶ್ ರೈ ಹೇಳಿದ್ದಾರೆ. ಇನ್ನೂ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ವಿಪತ್ತು ಪರಿಹಾರ ನಿಧಿಯಿಂದ ₹ 4 ಲಕ್ಷ ಪರಿಹಾರ ನೀಡುವಂತೆ ಮತ್ತು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದಾರೆ.
SHOCKING NEWS: ನಿದ್ರೆಗೆ ಜಾರಿದ್ದ ಬಾಲಕಿ ಶಾಲಾ ಕೊಠಡಿಯಲ್ಲೇ 18 ಗಂಟೆಗಳ ಕಾಲ ಲಾಕ್… ಮುಂದೇನಾಯ್ತು?
SHOCKING NEWS: ಯುಪಿಯಲ್ಲಿ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ… ಗರ್ಭಪಾತದಿಂದ ಮಹಿಳೆ ಸ್ಥಿತಿ ಚಿಂತಾಜನಕ
BIGG NEWS: ವಿಧಾನಪರಿಷತ್ ನಲ್ಲಿ ರಾರಾಜಿಸಿದ 40% ಕಮಿಷನ್; ಮಾಸ್ಕ್ ಮೇಲೆ ಬರೆಸಿಕೊಂಡು ಬಂದ ಕಾಂಗ್ರೆಸ್ ಸದಸ್ಯರು