ಮಡಿಕೇರಿ: ಮುಂದಿನ ಚುನಾವಣೆಗೆ ಹೊತ್ತಿಗೆ ಬಿಜೆಪಿ, ಜೆಡಿಎಸ್ ನ 30 ಶಾಸಕರು ಕಾಂಗ್ರೆಸ್ ಸೇರುವುದು ಖಚಿತ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಒಳರಾಜಕೀಯದ ಮಾತುಗಳು ತಳುಕು ಹಾಕುತ್ತಿದ್ದೆ. ಮೂರು ಪಕ್ಷಗಳು ತಮ್ಮ ತಮ್ಮ ಆಭ್ಯರ್ಥಿಗಳನ್ನು ಗೆಲ್ಲಿಸಲು ಒಳಗೊಳಗೆ ರಣತಂತ್ರವನ್ನು ಹೆಣೆಯುತ್ತಿದೆ. ಈ ನಡುವೆ ಮಡಿಕೇರಿಯಲ್ಲಿ ಲಕ್ಷ್ಮಣ್ ಅವರ ಸ್ಫೋಟಕ ಹೇಳಿಕೆ ಮತ್ತಷ್ಟು ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿದೆ. ಬಿಜೆಪಿ, ಜೆಡಿಎಸ್ನ 30 ಶಾಸಕರು ಕಾಂಗ್ರೆಸ್ ಸೇರುವುದು ಖಚಿತ ಎಂಬ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಮಡಿಕೇರಿಯಲ್ಲಿ ಬಹಿರಂಗ ಪಡಿಸಿದ್ದಾರೆ.
ಈಗಾಗಲೇ 30 ಶಾಸಕರುಗಳು ಅನಧಿಕೃತವಾಗಿ ಅರ್ಜಿಯನ್ನು ಹಾಕಿದ್ದು ಕಾಂಗ್ರೆಸ್ ಜೊತೆಗಿರುವುದಾಗಿ ಭರವಸೆ ನೀಡಿದ್ದಾರೆ. ಅವರು ಯಾರೆಂದು ಈಗಲೇ ಬಹಿರಂಗ ಪಡಿಸೋದಿಲ್ಲ. ಆದರೆ ಫೆಬ್ರವರಿ ತಿಂಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್ಗೆ ಅವರು ಬರಲಿದ್ದಾರೆ ಆಗ ಎಲ್ಲರಿಗೂ ವಿಚಾರ ತಿಳಿಯುತ್ತದೆ ಎಂದು ತಿಳಿಸಿದ್ದಾರೆ.