ನವದೆಹಲಿ: ಪ್ರಧಾನಿ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ಪ್ರಮುಖ ಸಂಸ್ಥೆಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ ಮೂರು ಯೂಟ್ಯೂಬ್ ಚಾನೆಲ್ಗಳನ್ನು ಕೇಂದ್ರ ಸರ್ಕಾರ ಭೇದಿಸಿದೆ.
ನ್ಯೂಸ್ ಹೆಡ್ಲೈನ್ಸ್, ಸರ್ಕಾರಿ ಅಪ್ಡೇಟ್ ಮತ್ತು ಆಜ್ ತಕ್ ಲೈವ್ ಈ ಮೂರು ಯೂಟ್ಯೂಬ್ ಚಾನೆಲ್ ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿತ್ತು. ಈ ಮೂರು ಚಾನೆಲ್ ಗಳು ಬರೋಬ್ಬರಿ 33 ಲಕ್ಷ ಚಂದಾದಾರರನ್ನುಹೊಂದಿದ್ದವು ಎಂದು ತಿಳಿದು ಬಂದಿದೆ.
YouTube channel “आज तक LIVE” is another den of #FakeNews. With over 65,000 subscribers, the YouTube channel spreads false claims about the death of various persons and misinformation about Government decisions. Here’s a thread by @PIBFactCheck busting some of its claims🔽 pic.twitter.com/91fyeToq5h
— PIB Fact Check (@PIBFactCheck) December 20, 2022
ಈ ಮೂರು ಚಾನೆಲ್ಗಳ ವಿರುದ್ಧ ಮಾಹಿತಿ ಪ್ರಸಾರ ಮಾಡುವ ಸರ್ಕಾರದ ನೋಡಲ್ ಏಜೆನ್ಸಿಯಾದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಸತ್ಯ ಪರಿಶೀಲನಾ ಘಟಕ ತನಿಖೆ ನಡೆಸಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪರಿಶೀಲನೆ ನಡೆಸಿದಾಗ ಪ್ರಧಾನಿ, ಮುಖ್ಯ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಮತ್ತು ಇವಿಎಂ ಮತದಾನದ ವ್ಯವಸ್ಥೆಯ ಬಗ್ಗೆ ತಪ್ಪು ಮಾಹಿತಿಯನ್ನು ಹರಡುವ ಹಲವು ವಿಡಿಯೋಗಳು ಪತ್ತೆಯಾಗಿವೆ. ಈ ವಿಡಿಯೋಗಳನ್ನು 30 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಗಳಾಗಿವೆ ಎಂದು ತಿಳಿದು ಬಂದಿದೆ.
A YouTube channel ‘SarkariUpdate’ with over 2.26M subscribers found to be propagating #FakeNews about various schemes of the Government of India. @PIBFactCheck found almost all of its content to be fake. Here’s a thread⬇️ pic.twitter.com/yg309uwRq2
— PIB Fact Check (@PIBFactCheck) December 20, 2022
ಈ ಯೂಟ್ಯೂಬ್ ಚಾನೆಲ್ಗಳು, ಪ್ರತಿಷ್ಠಿತ ಟಿವಿ ಚಾನೆಲ್ಗಳ ಲೋಗೋಗಳು ಮತ್ತು ಪ್ರಮುಖ ಸುದ್ದಿ ನಿರೂಪಕರ ಚಿತ್ರಗಳನ್ನು ಬಳಸಿಕೊಂಡು ವೀಕ್ಷಕರನ್ನು ಯಾಮಾರಿಸುತ್ತಿದ್ದವು ಎಂದು ತನಿಖೆಯಲ್ಲಿ ಬಯಲಾಗಿದೆ.
A #YouTube channel ‘News Headlines’ with almost 10 lakh subscribers and 32 crore views has been found to be propagating #FakeNews about the Prime Minister, Supreme Court of India, Chief Justice of India, and the Election Commission of India pic.twitter.com/9qUR7xqBd9
— PIB Fact Check (@PIBFactCheck) December 20, 2022
ಕಳೆದೊಂದು ವರ್ಷದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತಪ್ಪು ಮಾಹಿತಿಯ ವಿರುದ್ಧದ ಶಿಸ್ತುಕ್ರಮದ ಭಾಗವಾಗಿ ನೂರಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್ಗಳನ್ನು ನಿರ್ಬಂಧಿಸಿದೆ.
BIG NEWS: ನಿಯಮಾನುಸಾರ ನೌಕರರು ‘Moonlight’ ಕೆಲಸ ಮಾಡುವಂತಿಲ್ಲ: ಕೇಂದ್ರ ಸರ್ಕಾರ
ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ನನ್ನದು : ಬಿಜೆಪಿಗೆ ರಾಹುಲ್ ಗಾಂಧಿ ಟಾಂಗ್
BIGG NEWS : ಆಂಧ್ರದ ರೌಡಿಶೀಟರ್ ಮೇಲೆ ಗುಂಡಿನ ದಾಳಿ ಪ್ರಕರಣ : ಮತ್ತೋರ್ವ ಆರೋಪಿ ಕೋರ್ಟ್ ಗೆ ಶರಣು