ಗುರುಗ್ರಾಮ: ಗುರುಗ್ರಾಮದ ಉದ್ಯೋಗ್ ವಿಹಾರ್ ಪ್ರದೇಶದಲ್ಲಿ ಹಳೆಯ ಕಟ್ಟಡವೊಂದು ಕುಸಿದುಬಿದ್ದಿದೆ. ಸುಮಾರು 3 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. ಉದ್ಯೋಗ್ ವಿಹಾರ್ ನ ಮೊದಲ ಹಂತದ ಪ್ಲಾಟ್ 257 ರಲ್ಲಿ ಈ ಘಟನೆ ನಡೆದಿದೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ನೆಲಸಮವಾಗುತ್ತಿದ್ದ ಕಟ್ಟಡ ಕುಸಿದುಬಿದ್ದ ನಂತರ 2-3 ಕಾರ್ಮಿಕರು ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈಗಾಗಲೇ ಒಬ್ಬ ಕಾರ್ಮಿಕನನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ಲಲಿತ್ ಕುಮಾರ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪಶ್ಚಿಮ ವಿಭಾಗದ ಡಿಸಿಪಿ ದೀಪಕ್ ಸಹರಾನ್, “ಇದು ಸೆಪ್ಟೆಂಬರ್ 26 ರಿಂದ ನೆಲಸಮಗೊಳಿಸಲು ಪ್ರಾರಂಭಗೊಂಡ ಹಳೆಯ ಕಟ್ಟಡವಾಗಿದೆ. ಇದು 3 ಅಂತಸ್ತಿನ ಎತ್ತರದ ಕಟ್ಟಡವಾಗಿದ್ದು, ಅದರಲ್ಲಿ 2 ಮಹಡಿಗಳನ್ನು ನೆಲಸಮಗೊಳಿಸಲಾಗಿದೆ. ಉಳಿದ ಭಾಗವು ಕುಸಿದಿದ್ದು, ಅದರ ಅಡಿಯಲ್ಲಿ 3 ಕಾರ್ಮಿಕರು ಸಿಕ್ಕಿಬಿದ್ದರು. ಒಬ್ಬನನ್ನು ರಕ್ಷಿಸಲಾಗಿದೆ.”
Gurugram, Haryana | Building collapse in Udyog Vihar Phase I
As per preliminary information, 2-3 laborers are feared trapped after a building that was being demolished, collapsed. Rescue operation on. One labourer already rescued: Lalit Kumar, Fire Officer pic.twitter.com/gTwu5lf6Cu
— ANI (@ANI) October 3, 2022