ಲಂಡನ್ : ಇಲ್ಲಿನ ಸೆಂಟ್ರಲ್ ಲಂಡನ್ನ ಲಿವರ್ಪೂಲ್ ಸ್ಟ್ರೀಟ್ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಗಳು ಮೂವರಿಗೆ ಚಾಕುವಿನಿಂದ ಿರಿದಿರುವ ಘಟನೆ ನಡೆದಿದೆ.
ಬೆಳಿಗ್ಗೆ 9.46 ಕ್ಕೆ ಬಿಷಪ್ಸ್ಗೇಟ್ನಲ್ಲಿ ಘಟನೆ ನಡೆಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
Three people stabbed in an incident near Liverpool Street Station in central London: UK Media
— ANI (@ANI) October 6, 2022
ಘಟನೆಯಲ್ಲಿ ಗಾಯಗೊಂಡ ಮೂವರಿಗೆ LAS ನಿಂದ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದು ನಡೆಯುತ್ತಿರುವ ಪರಿಸ್ಥಿತಿಯಾಗಿದೆ, ಆದರೆ ಭಯೋತ್ಪಾದನೆಗೆ ಸಂಬಂಧಿಸಿದ್ದು ಎಂದು ಪರಿಗಣಿಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ಶಂಕಿತ ದರೋಡೆ ಎಂದು ಪರಿಗಣಿಸುತ್ತಿದ್ದೇವೆ ಎಂದು ಲಂಡನ್ ನಗರ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.