ನವದೆಹಲಿ: ಈ ವರ್ಷದ ಆರಂಭದಲ್ಲಿ 2022 ರ ಮಾರ್ಚ್ 8 ರಂದು ಬ್ರಹ್ಮೋಸ್ ಕ್ಷಿಪಣಿ ದುರಂತಕ್ಕೆ ( BrahMos missile misfiring incident ) ಮೂವರು ಅಧಿಕಾರಿಗಳನ್ನು ಪ್ರಾಥಮಿಕವಾಗಿ ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಭಾರತೀಯ ವಾಯುಪಡೆ ( Indian Air Force ) ಮಂಗಳವಾರ ಹೇಳಿದೆ.
ಅವರ ಸೇವೆಯನ್ನು ಕೇಂದ್ರ ಸರ್ಕಾರವು ( Central Govt ) ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. “ಆಗಸ್ಟ್ 23, ಇಂದು ಅಧಿಕಾರಿಗಳ ಮೇಲೆ ವಜಾ ಆದೇಶಗಳನ್ನು ನೀಡಲಾಗಿದೆ” ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ರೈತರೇ, ನೀವು ಪಿಎಂ ಕಿಸಾನ್ ಫಲಾನುಭವಿಯಾಗಿದ್ರೆ, ಖಾತರಿ ಇಲ್ಲದೇ ₹1.60 ಲಕ್ಷ ಸಾಲ ಪಡೆಯ್ಬೋದು ; ಹೇಗೆ ಗೊತ್ತಾ?
ಇದಲ್ಲದೆ, ಮೂವರು ಅಧಿಕಾರಿಗಳು ಎಸ್ಒಪಿಯಿಂದ ವಿಚಲನಗೊಂಡಿರುವುದು ಬ್ರಹ್ಮೋಸ್ ಕ್ಷಿಪಣಿಯ ಆಕಸ್ಮಿಕ ಉಡಾವಣೆಗೆ ಕಾರಣವಾಯಿತು ಎಂದು ವಿಚಾರಣಾ ನ್ಯಾಯಾಲಯವು ಕಂಡುಕೊಂಡಿದೆ ಎಂದು ಅಧಿಕಾರಿಗಳು ಗಮನಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
Three officers have primarily been held responsible for the BrahMos missile misfiring incident on 9th March 2022. Their services have been terminated by Central Govt with immediate effect. Termination orders have been served upon the officers today, 23rd August: Indian Air Force pic.twitter.com/y3eIQglOZz
— ANI (@ANI) August 23, 2022