ಆಗ್ರಾ: ಸ್ವಾತಂತ್ರ್ಯ ದಿನಾಚರಣೆಯಂದು ಆಗ್ರಾದ ಗೋಕುಲಪುರ ರಿಯಾದಲ್ಲಿ ‘ತಿರಂಗ ಯಾತ್ರೆ’ ನಡೆಸುತ್ತಿದ್ದಾಗ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಮೂವರು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಘಟನೆಯ ವಿಡಿಯೋವನ್ನು ಪೊಲೀಸರು ಗಮನದಲ್ಲಿಟ್ಟುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ ನಗರ) ವಿಕಾಸ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಆಗ್ರಾದ ಲೋಹಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಕುಲಪುರದಲ್ಲಿ ಆಗಸ್ಟ್ 15 ರಂದು ‘ತಿರಂಗ ಯಾತ್ರೆ’ ನಡೆಸಲಾಗುತ್ತಿದ್ದು, ರ್ಯಾಲಿಯಲ್ಲಿ ಕೆಲವರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಈ ಸಂಬಂಧ ಆರೋಪಿಗಳಾದ ಆಗ್ರಾ ನಗರದ ಗೋಕುಲಪುರ ನಿವಾಸಿ ಫೈಜಾನ್, ಸದಾಬ್ ಮತ್ತು ಮುಹಜ್ಜಮ್ ವಿರುದ್ಧ ಐಪಿಸಿ ಸೆಕ್ಷನ್ 153-ಬಿ (ಅಸಮಾಧಾನ ಉಂಟು ಮಾಡುವ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ವಿಕಾಸ್ ಕುಮಾರ್ ಹೇಳಿದ್ದಾರೆ.
ಪ್ರೇಮ ಪ್ರಕರಣ: ಹಾಡಹಗಲೇ ಯುವತಿ ಮೇಲೆ ಗುಂಡು ಹಾರಿಸಿ ವ್ಯಕ್ತಿ ಎಸ್ಕೇಪ್… Video