ದೆಹಲಿ: ಶುಕ್ರವಾರ ಇಂಡಿಯಾ ಗೇಟ್ ಸಂಕೀರ್ಣದ ಮೇಲೆ ಡ್ರೋನ್ಗಳ ಸಮೂಹವು ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ಅವರ ಜೀವನ ಮತ್ತು ಪರಂಪರೆಯನ್ನು ಪ್ರದರ್ಶಿಸಿವೆ. ಈ ಡ್ರೋನ್ಗಳು ಎಂಟು ವಿಭಿನ್ನ ರಚನೆಗಳ ಮೂಲಕ ತಮ್ಮ ಝಲಕ್ಗಳನ್ನು ಪ್ರದರ್ಶಿಸಿವೆ.
“ಇಲ್ಲಿ ಒಟ್ಟು 250 ಡ್ರೋನ್ಗಳನ್ನು ಬಳಸಲಾಗಿದೆ. ಗುರುವಾರ ಪ್ರಧಾನಿ ಅನಾವರಣಗೊಳಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೊಸ ಭವ್ಯ ಪ್ರತಿಮೆಯ ಪ್ರದರ್ಶನ ಕೊನೆಯ ರಚನೆಯಾಗಿದೆ. ಡ್ರೋನ್ ಶೋ ನೇತಾಜಿ ಅವರ ಜೀವನ ಮತ್ತು ಪರಂಪರೆಯನ್ನು ಬಿಂಬಿಸುತ್ತದೆ” ಎಂದು ಸಂಸ್ಕೃತಿ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ರಾತ್ರಿ 8.35ರ ಸುಮಾರಿಗೆ ಆರಂಭವಾದ ಕಾರ್ಯಕ್ರಮ 10 ನಿಮಿಷಗಳ ಕಾಲ ನಡೆಯಿತು. ಜನರು ತಮ್ಮ ಮೊಬೈಲ್ ಫೋನ್ ಕ್ಯಾಮೆರಾಗಳಲ್ಲಿ ಈ ಅದ್ಭುತ ಕ್ಷಣಗಳನ್ನು ಸೆರೆಹಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
#WATCH | Ministry of Culture organises a drone show at the India Gate, in Delhi. pic.twitter.com/Cb3EeywRYI
— ANI (@ANI) September 9, 2022
BIG NEWS: ಸೆ.19 ಕ್ಕೆ ನಡೆಯುವ ಬ್ರಿಟನ್ ʻರಾಣಿ ಎಲಿಜಬೆತ್ʼ ಅಂತ್ಯಕ್ರಿಯೆಯಲ್ಲಿ ಅಮೆರಿಕ ಅಧ್ಯಕ್ಷ ʻಜೋ ಬೈಡನ್ʼ ಭಾಗಿ