ಬಳ್ಳಾರಿ: ಜಮೀನಿಗೆ ಹೂ ಕೊಯ್ಯೋದಕ್ಕೆ ತೆರಳಿದ್ದಂತ 25 ಕಾರ್ಮಿಕರು ವೇದಾವತಿ ನದಿಯಲ್ಲಿಯೇ ಸಿಲುಕಿ ಪರದಾಡುತ್ತಿರುವ ಘಟನೆ ಬಳ್ಳಾರಿಯ ಯಾಲ್ಪಿ ಕಗ್ಗಲು ಗ್ರಾಮದಲ್ಲಿ ನಡೆದಿದೆ.
ಬಳ್ಳಾರಿ ತಾಲೂಕಿನ ಯಾಲ್ಪಿ ಕಗ್ಗಲು ಗ್ರಾಮದಲ್ಲಿ ಮಲ್ಲಿಗೆ ಹೂ ಹರಿಯೋದಕ್ಕೆ ಜಮೀನಿಗೆ ತೆರಳಿದ್ದಂತ 25 ಕಾರ್ಮಿಕರು, ವಾಪಾಸ್ ಆಗುತ್ತಿದ್ದಂತ ಸಂದರ್ಭದಲ್ಲಿ ಭಾರೀ ಮಳೆಯಿಂದಾಗಿ ಉಗ್ಗಿ ಹರಿದಂತ ವೇದಾವತಿ ನದಿಯಲ್ಲಿಯೇ ಸಿಲುಕಿರೋದಾಗಿ ತಿಳಿದು ಬಂದಿದೆ.
‘ಆರ್ಯವೈಶ್ಯ ಸಮುದಾಯ’ದವರಿಗೆ ಗುಡ್ ನ್ಯೂಸ್: ‘ಸ್ವ ಉದ್ಯೋಗಕ್ಕೆ, ಶೈಕ್ಷಣಿಕ ಸಾಲ’ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಕಳೆದ 2 ಗಂಟೆಯಿಂದ ವೇದಾವತಿ ನದಿಯ ನಡುಗಡ್ಡೆಯಲ್ಲೇ ಸಿಲುಕಿ ಪರದಾಡುತ್ತಿದ್ದಾರೆ. ರಕ್ಷಣೆಗಾಗಿ ಕಾರ್ಮಿಕರು ಪರದಾಡುತ್ತಿದ್ದರೂ, ರಕ್ಷಣೆ ಮಾಡುವಂತೆ ಗೋಳಾಡುತ್ತಿದ್ದರೂ, ಇದುವರೆಗೆ ರಕ್ಷಣೆಗಾಗಿ ಯಾವುದೇ ರಕ್ಷಣಾ ಸಿಬ್ಬಂದಿ ಆಗಮಿಸದೇ ಇರೋದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
BREAKING NEWS: ಬೆಚ್ಚಿಬಿದ್ದ ಚಿಕ್ಕಬಳ್ಳಾಪುರ ಜನತೆ: ಹಾಡಹಗಲೇ ರೇಷ್ಮೆ ವ್ಯಾಪಾರಿಯ ಕೊಚ್ಚಿ ಕೊಲೆಗೆ ಯತ್ನ