ಅಮೇರಿಕಾ: ಶೀತವಾದ ಚಳಿಗಾಲದ ಚಂಡಮಾರುತವು ದೇಶಾದ್ಯಂತ ಬೀಸುತ್ತಿರುವುದರಿಂದ ಕನಿಷ್ಠ 23 ಜನರು ಸಾವನ್ನಪ್ಪಿ, ಲಕ್ಷಾಂತರ ಮನೆಗಳು ಅಮೇರಿಕಾದಲ್ಲಿ ನಾಶಗೊಂಡಿವೆ ಎಂಬುದಾಗಿ ತಿಳಿದು ಬಂದಿದೆ. ಅಲ್ಲದೇ ಚಳಿಗಾಲದ ಚಂಡಮಾರುತದಿಂದಾಗಿ ವಿದ್ಯುತ್ ಸರಬರಾಜಿನಲ್ಲಿಯೂ ವ್ಯತ್ಯಯ ಉಂಟಾಗಿದೆ.
ಚಂಡಮಾರುತವು ನ್ಯೂಯಾರ್ಕ್ನ ಬಫಲೋ ಮೇಲೆ ಭಾರೀ ಹಾನಿಯನ್ನು ಉಂಟು ಮಾಡಿದೆ. ಚಂಡಮಾರುತ-ಬಲದ ಗಾಳಿಯು ವೈಟ್ಔಟ್ ಪರಿಸ್ಥಿತಿಗಳಿಗೆ ಕಾರಣವಾಯಿತು. ತುರ್ತು ಸ್ಪಂದನ ಪ್ರಯತ್ನಗಳು ಸ್ಥಗಿತಗೊಂಡಿವೆ. ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.
ಚಂಡ ಮಾರುತದಿಂದ ಕಾರುಗಳು ಅಪಘಾತಗೊಳ್ಳುತ್ತಿದ್ದರೇ, ಅಲ್ಲಲ್ಲಿ ಬಿದ್ದಂತ ಮರಗಳಿಂದಾಗಿಯೂ ಜೀವ ಹಾನಿ ಸಂಭವಿಸಿದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಚಳಿಗಾಳಿಯೊಂದಿಗೆ ಎದ್ದಿರುವಂತ ಚಂಡಮಾರುತದಲ್ಲಿ ಯುಎಸ್ ನ ಬಫಲೋ ಪ್ರದೇಶದಲ್ಲಿ ಮೂವರು ಸಾವನ್ನಪ್ಪಿದ್ದರೇ, ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋದಾಗಿ ತಿಳಿದು ಬಂದಿದೆ. ಇದೀಗ ಐತಿಹಾಸಿಕ ಹಿಮಮಾರುತದ ಪರಿಸ್ಥಿತಿಯಿಂದಾಗಿ ಅಮೇರಿಕಾ ಜನತೆ ತತ್ತರಿಸಿ ಹೋಗಿದ್ದಾರೆ. ಈವರೆಗೆ 23 ಮಂದಿ ಸಾವನ್ನಪ್ಪಿದ್ದರೇ, ದಟ್ಟ ಮಂಜು ಸಹಿತ ಚಳಿಗಾಳಿಯ ಚಂಡಮಾರುತದ ಕಾರಣ 2,700ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.
‘ನಿಮಗೆ ಅಚ್ಚರಿ’ಯಾದರೂ ಸತ್ಯ: ಈ ರಾಜ್ಯದಲ್ಲಿ ‘ಸರ್ಕಾರಿ ಕಚೇರಿ’ಗಳಿಗೆ ‘ಸಗಣಿಯಿಂದ ತಯಾರಿಸಿದ ಬಣ್ಣ’ ಬಳಕೆ
BIGG NEWS : `ಪಿಎಂ ಕಿಸಾನ್ ಯೋಜನೆ’ ಅನರ್ಹ ಫಲಾನುಭವಿಗಳಿಗೆ ಬಿಗ್ ಶಾಕ್!