ಕೇರಳ: ದುಬೈನಿಂದ ಭಾರತಕ್ಕೆ ವಾಪಾಸ್ ಆಗಿದ್ದಂತ 22 ವರ್ಷದ ವ್ಯಕ್ತಿಯೊಬ್ಬನಿಗೆ ಮಂಕಿಪಾಕ್ಸ್ ( Monkeypox Case ) ದೃಢಪಟ್ಟಿತ್ತು. ಇಂತಹ ವ್ಯಕ್ತಿ ನಿನ್ನೆ ಸಾವನ್ನಪ್ಪಿದ್ದಾನೆ. ಈ ಮೂಲಕ ಆತ ಮಂಕಿಪಾಕ್ಸ್ ಸೋಂಕಿನಿಂದ ಸಾವನ್ನಪ್ಪಿರೋದಾಗಿ ಕೇರಳ ಆರೋಗ್ಯ ಸಚಿವರು ದೃಢಪಡಿಸಿದ್ದಾರೆ. ಈ ಮೂಲಕ ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿಗೆ ಮೊದಲ ಬಲಿಯನ್ನು ಪಡೆದಂತೆ ಆಗಿದೆ.
BIG NEWS: ರಾಜ್ಯದಲ್ಲಿ ಮುಂದುವರೆದ ಕೊರೋನಾ ಏರಿಕೆ ಪ್ರಮಾಣ: ಹಲವು ಜಿಲ್ಲೆಗಳಲ್ಲಿ ಕೋವಿಡ್ ದಿಢೀರ್ ಸ್ಪೋಟ
ಕೇರಳ ಮೂಲಕ ವ್ಯಕ್ತಿಯೊಬ್ಬ ದುಬೈನಿಂದ ಭಾರತಕ್ಕೆ ವಾಪಾಸ್ ಆಗಿದ್ದರು. ಕೇರಳಕ್ಕೆ ಹಿಂದಿರುಗಿದ ಬಳಿಕ ಅವರಿಗೆ ಮಂಕಿಪಾಕ್ಸ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇಂತಹ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ನಿನ್ನೆ ಅವರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
BREAKING NEWS: ಕಾಮನ್ವೆಲ್ತ್ ಗೇಮ್ಸ್ 2022: ಟಿ20ಐ ಗ್ರೂಪ್ ಹಂತದಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
ಈ ಕುರಿತಂತೆ ಮಾಹಿತಿ ನೀಡಿರುವಂತ ಕೇರಳ ಆರೋಗ್ಯ ಸಚಿವರು, ರಾಜ್ಯಕ್ಕೆ ದುಬೈನಿಂದ ಆಗಮಿಸಿದ್ದಂತ 22 ವರ್ಷದ ವ್ಯಕ್ತಿ ನಿನ್ನೆ ಸಾವನ್ನಪ್ಪಿದ್ದರು. ಅವರ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಅವರಿಗೆ ಮಂಕಿಪಾಕ್ಸ್ ಸೋಂಕು ತಗುಲಿರೋದು ದೃಢಪಟ್ಟಿದೆ ಎಂಬುದಾಗಿ ಖಚಿತಪಡಿಸಿದ್ದಾರೆ. ಹೀಗಾಗಿ ಭಾರತದಲ್ಲಿ ಮಂಕಿಪಾಕ್ಸ್ ಸೋಂಕಿಗೆ ಮೊದಲ ಬಲಿಯನ್ನು ಪಡೆದಂತೆ ಆಗಿದೆ.