ಜಿನೀವಾ : ಲಿಬಿಯಾ ಕರಾವಳಿಯಲ್ಲಿ ನಡೆದ ದೋಣಿ ದುರಂತದಲ್ಲಿ ಮಾಲಿಯನ್ನ ಇಪ್ಪತ್ತೆರಡು ವಲಸಿಗರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ತಿಳಿಸಿದೆ.
ವಲಸಿಗರು ಜೂನ್ 22 ರಂದು ರಬ್ಬರ್ ಬೋಟ್ನಲ್ಲಿ ಟುನೀಶಿಯಾದ ಗಡಿಯ ಸಮೀಪವಿರುವ ಲಿಬಿಯಾದ ನಗರವಾದ ಜುವಾರಾದಿಂದ ಪ್ರಯಾಣ ಬೆಳೆಸಿದ್ದರು.
ಸಮುದ್ರದಲ್ಲಿ ಘಟನೆ ನಡೆದ ಒಂಬತ್ತು ದಿನಗಳ ನಂತರ 61 ಮಂದಿಯನ್ನು ಸುರಕ್ಷಿತವಾಗಿ ತೀರಕ್ಕೆ ಕರೆತರಲಾಯಿತು. ಬದುಕುಳಿದವರು ಬಹುತೇಕ ಮಾಲಿ ದೇಶದವರಾಗಿದ್ದಾರೆ ಎಂದು ಯುಎನ್ನ ವಲಸೆಗಾಗಿ ಅಂತರರಾಷ್ಟ್ರೀಯ ಸಂಸ್ಥೆ ತಿಳಿಸಿದೆ.
ನೀರಿನಲ್ಲಿ ಮುಳುಗುವಿಕೆ ಮತ್ತು ನಿರ್ಜಲೀಕರಣದಿಂದ ಮೂವರು ಮಕ್ಕಳು ಸೇರಿದಂತೆ 22 ಮಂದಿ ವಲಸಿಗರು ಸಾವನ್ನಪ್ಪಿದ್ದಾರೆ ಎಂದು ಬದುಕುಳಿದವರು ತಿಳಿಸಿದ್ದಾರೆ.
ಇನ್ನೂ, ಬದುಕಿ ಬಂದ ಕೆಲವರ ಆರೋಗ್ಯಸ್ಥಿತಿ ಕೆಟ್ಟದಾಗಿದ್ದರ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.