ಬೆಂಗಳೂರು: ಕರ್ನಾಟಕ ಪಶು ವೈದ್ಯಕೀಯ ವಿವಿ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿವಿಯಲ್ಲಿ ಖಾಲಿ ಇರುವಂತ 217 ಬೋಧಕ ಮತ್ತು 220 ಬೋಧಕೇತರ ಸಿಬ್ಬಂದಿಗಳ ಹುದ್ದೆಗಳನ್ನು ಶೀಘ್ರವೇ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಪಶಿ ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ( Minister Prabhu Chowan ) ಹೇಳಿದ್ದಾರೆ.
ನೆರೆ ಸಂತ್ರಸ್ತ ‘ರೈತ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘ಬೆಳೆ ಪರಿಹಾರ’ಕ್ಕೆ 300 ಕೋಟಿ ರೂ ಬಿಡುಗಡೆ
ಈ ಕುರಿತು ಮಾಹಿತ ನೀಡಿರುವಂತ ಅವರು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿಯಲ್ಲಿ ಖಾಲಿ ಇರುವಂತ 217 ಬೋಧಕ, 220 ಬೋಧಕೇತರ ಹುದ್ದೆಗಳ ನೇಮಕಾತಿಗೆ ( Recruitment ) ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆರ್ಥಿಕ ಇಲಾಖೆಯಿಂದ ಒಪ್ಪಿಗೆ ದೊರೆತ ತಕ್ಷಣವೇ ನೇಮಕಾತಿ ಅದಿಸೂಚನೆ ಹೊರಡಿಸಲಾಗುತ್ತದೆ ಎಂದರು.
ಈ ಹುದ್ದೆಗಳಲ್ಲಿ 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ 104 ಬೋಧಕ, 122 ಬೋಧಕೇತರ ಹುದ್ದೆಗಳನ್ನು ನೇಮಕಾತಿಯಲ್ಲಿ ಮೀಸಲಿಡಲಾಗಿದೆ. ಇದಲ್ಲದೇ ಅಥಣಿ ವೈದ್ಯಕೀಯ ವಿವಿ ಪ್ರಾರಂಭಕ್ಕಾಗಿ 77 ಬೋಧಕ, 98 ಬೋಧಕೇತರ ಹುದ್ದೆಗಳು ಮಂಜೂರಾಗಿದ್ದು, ಆ ಹುದ್ದೆಗಳಿಗೂ ಶೀಘ್ರವೇ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ವರ್ಷದಲ್ಲಿ 30 ಐಟಿಐಗಳ ಉನ್ನತೀಕರಣ – ಸಚಿವ ಅಶ್ವತ್ಥನಾರಾಯಣ