ಕುಣಿಗಲ್ : 2023 ರ ವಿಧಾನಸಭೆ ಚುನಾವಣೆ ಜೆಡಿಎಸ್ ಪಾಲಿಗೆ ಕೊನೆಯ ಚುನಾವಣೆ ಆಗಲಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕ್ಲಿನಿಕ್ ಬಾಗಿಲು ತೆರೆಯಲು ವಿಳಂಬವಾಗಿದ್ಕೆ ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದ ಜನರ ಗುಂಪು… Video
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಅಂಚೆಪಾಳ್ಯ ಕ್ರಾಸ್ನಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಮುಂದಿನ ವಿಧಾನಸಭೆ ಚುನಾವಣೆಯು ಜೆಡಿಎಸ್ ಪಾಲಿಗೆ ಒಂದು ರೀತಿ ಕೊನೆ ಚುನಾವಣೆ. ಇಲ್ಲಿಂದ ಹೊಸ ಅಧ್ಯಾಯ ಆರಂಭವಾಗಬೇಕಿದೆ. ಮುಂದಿನ 25 ವರ್ಷಗಳ ಕಾಲ ನಮ್ಮದೇ ಪಾರುಪತ್ಯ ಇರುತ್ತದೆ ಎಂದು ಹೇಳಿದ್ದಾರೆ.
BIGG NEWS : ಧಮ್, ತಾಕತ್ತು ಯಾರಿಗಿದೆ ಎಂಬುದು ಜನರು ತೀರ್ಮಾನಿಸುತ್ತಾರೆ : ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ನಿಖಿಲ್ ಕುಮಾರಸ್ವಾಮಿ ಅವರ ಮಾತಿನ ಬಗ್ಗೆ ವಿವರಣೆ ನೀಡಿದ ಪಕ್ಷದ ನಾಯಕರೊಬ್ಬರು. ಇದು ಕಷ್ಟಕಾರ್ಪಣ್ಯಗಳ ಕೊನೆ ಚುನಾವಣೆ ಆಗಬೇಕು ಎನ್ನುವುದರ ಬದಲು ನಿಖಿಲ್ ಅವರು ನಮ್ಮ ಪಾಲಿನ ಕೊನೆ ಚುನಾವಣೆ ಎಂದಿದ್ದಾರೆ ಎಂದು ಹೇಳಿದರು.