ಕಾಬೂಲ್ : 2023ರ ಮಾರ್ಚ್ ಅಂತ್ಯದ ವೇಳೆಗೆ ಸುಮಾರು 20 ಮಿಲಿಯನ್ ಜನರು ತೀವ್ರ ಹಸಿವನ್ನು ಎದುರಿಸುವ ಅಪಾಯದಲ್ಲಿರುವುದರಿಂದ ಮುಂಬರುವ ವರ್ಷದಲ್ಲಿ ಅಫ್ಘಾನಿಸ್ತಾನದ ಆರ್ಥಿಕ ಮತ್ತು ಮಾನವೀಯ ಪರಿಸ್ಥಿತಿಯನ್ನು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್ಎ) ತನ್ನ ವರದಿಯಲ್ಲಿ ತಿಳಿಸಿದೆ ಎಂದು ಟೋಲೋ ನ್ಯೂಸ್ ವರದಿ ಮಾಡಿದೆ.
ನಾಲ್ಕು ಮಿಲಿಯನ್ ಮಕ್ಕಳು ಮತ್ತು ಮಹಿಳೆಯರು ತೀವ್ರ ಅಪೌಷ್ಟಿಕತೆಯನ್ನು ಅನುಭವಿಸುತ್ತಾರೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದ್ದು, ಇದೇ ವೇಳೆ ಅಪೌಷ್ಟಿಕತೆಯ ಪ್ರಮಾಣವು ಅತ್ಯಧಿಕವಾಗಿ ಮುಂದುವರಿಯುತ್ತದೆಯಂತೆ. “ಹದಗೆಡುತ್ತಿರುವ ಆರ್ಥಿಕತೆಯು ಆದಾಯದಲ್ಲಿ ತೀವ್ರ ಕುಸಿತ, ಹೆಚ್ಚುತ್ತಿರುವ ಸಾಲ ಮತ್ತು ಹೆಚ್ಚಿನ ನಿರುದ್ಯೋಗಕ್ಕೆ ಕಾರಣವಾಗಿದೆ. ಸರಕುಗಳ ಬೆಲೆಗಳಲ್ಲಿನ ತೀವ್ರ ಏರಿಕೆಯಿಂದಾಗಿ, ಜನರು ಈಗ ತಮ್ಮ ಆದಾಯದ ಶೇಕಡಾ 71 ರಷ್ಟನ್ನು ಆಹಾರಕ್ಕಾಗಿ ಖರ್ಚು ಮಾಡುತ್ತಾರೆ” ಎಂದು ವರದಿಯನ್ನು ಉಲ್ಲೇಖಿಸಿ ಟೋಲೋ ನ್ಯೂಸ್ ವರದಿ ಮಾಡಿದೆ. ಇದಲ್ಲದೆ, ವ ಚಳಿಗಾಲದಿಂದಾಗಿ, ಅಫ್ಘಾನಿಸ್ತಾನದ ನಿವಾಸಿಗಳು ತಮ್ಮ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಮತ್ತೆ ಮತ್ತೆ ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.