ಚೆನ್ನೈ: ಚೆನ್ನೈನ ಐಟಿ ಕಾರಿಡಾರ್ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಇಬ್ಬರು ಮಹಿಳಾ ಸಾಫ್ಟ್ವೇರ್ ವೃತ್ತಿಪರರು ಸಾವನ್ನಪ್ಪಿರುವ ಘಟನೆ ನಡೆದಿದೆ.
BREAKING NEWS : ಚಿಕ್ಕಬಳ್ಳಾಪುರದಲ್ಲಿ ಬೈಕ್ಗೆ ಟಿಪ್ಪರ್ ಡಿಕ್ಕಿ : ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ದುರ್ಮರಣ
ಮೃತರನ್ನು ಲಾವಣ್ಯ (23) ಮತ್ತು ಆರ್ ಲಕ್ಷ್ಮಿ ಎಂದು ಗುರುತಿಸಲಾಗಿದೆ. ಇಬ್ಬರೂ ಎಚ್ಸಿಎಲ್ ಸ್ಟೇಟ್ ಸ್ಟ್ರೀಟ್ ಸರ್ವೀಸ್ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ 11.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ವೇಳೆ ಹೊಂಡಾ ಸಿಟಿ ವಾಹನ ಡಿಕ್ಕಿ ಹೊಡೆದಿದೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಕಾರು ಚಾಲಕ ಮೋತೀಶ್ ಕುಮಾರ್ (20) ಎಂಬುವವನನ್ನು ಬಂಧಿಸಲಾಗಿದೆ.ಈತ ಅತಿ ವೇಗವಾಗಿ ಕಾರನ್ನು ಚಲಾಹಿಸುತ್ತಿದ್ದ. ಕಾರು ಗಂಟೆಗೆ ಸುಮಾರು 130 ಕಿಮೀ ವೇಗದಲ್ಲಿ ಓಡುತ್ತಿರುವಂತೆ ತೋರುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎನ್ಡಿಟಿವಿಗೆ ತಿಳಿಸಿದ್ದಾರೆ.
ಮೃತ ಯುವತಿಯರಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.ಲಾವಣ್ಯ ಆಂಧ್ರಪ್ರದೇಶದ ಚಿತ್ತೂರಿನರಾಗಿದ್ದು, ಲಕ್ಷ್ಮಿ ಕೇರಳದ ಪಾಲಕ್ಕಾಡ್ ಮೂಲದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
BREAKING NEWS : ‘NEET SS’ ಫಲಿತಾಂಶ ಪ್ರಕಟ ; ‘ರಿಸಲ್ಟ್’ ನೋಡಲು ಈ ಹಂತ ಅನುಸರಿಸಿ |NEET SS Result 2022