ಛತ್ತೀಸ್ಗಢ : ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಛತ್ತೀಸ್ಗಢದ ಸೂರಜ್ಪುರ ಜಿಲ್ಲೆಯಲ್ಲಿ ನಡೆದಿದೆ.
BREAKING NEWS : ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಸೆ.26 ರಿಂದ 14 ದಿನ ‘ದಸರಾ ರಜೆ’ ಘೋಷಣೆ
ಪ್ರತಾಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಖಜೂರಿ ಗ್ರಾಮದಲ್ಲಿ ಸೋಮವಾರ(ನಿನ್ನೆ) ಸಂಜೆ ಈ ಘಟನೆ ನಡೆದಿದೆ. ಮೃತರನ್ನು ಸಮೀಪದ ಟೋನಿ ಗ್ರಾಮದ ನಿವಾಸಿಗಳಾದ ನಂದಲಾಲ್ ಪೈಕ್ರಾ (27) ಮತ್ತು ಸಂಜಯ್ ಯಾದವ್ (25) ಎಂದು ಗುರುತಿಸಲಾಗಿದೆ.
ಪ್ರತಾಪುರ್ ಮಾರುಕಟ್ಟೆಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ ಏಕಾಏಕಿ ಮಳೆ ಆರಂಭವಾಯಿತು. ಈ ಸಮಯದಲ್ಲಿ ಇಬ್ಬರೂ ಮರದ ಕೆಳಗೆಯಿರುವ ಅಂಗಡಿಯ ಮುಂದೆ ಆಶ್ರಯ ಪಡೆದಿದ್ದರು. ಆಗ ಇದ್ದಕ್ಕಿದ್ದಂತೆ ಅಲ್ಲಿ ಮಿಂಚು ಬಡಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಅಂಗಡಿ ಮಾಲೀಕ ಸೇರಿದಂತೆ ಇತರ ಮೂವರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎನ್ನಲಾಗತ್ತಿದೆ.
ಸೂರಜ್ಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡ ರಾಜ್ಯದ ಸುರ್ಗುಜಾ ವಿಭಾಗದಲ್ಲಿ ಈಚೆಗೆ ಹಲವು ಬಾರಿ ಸಿಡಿಲು ಬಡಿದ ಘಟನೆಗಳು ನಡೆದಿವೆ.