ಉತ್ತರ ಪ್ರದೇಶ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ನಿವಾಸಿಯಾಗಿರುವ 2.3 ಅಡಿ ಎತ್ತರದ ಅಜೀಂ ಮನ್ಸೂರಿ ಅವರು ತಮ್ಮ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲು ಬಯಸಿದ್ದಾರೆ.
ಅಜೀಂ ಮನ್ಸೂರಿ ನವೆಂಬರ್ನಲ್ಲಿ ಮದುವೆಯಾಗಲು ಸಿದ್ಧರಾಗಿದ್ದಾರೆ. ಇವರ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲು ರೆಡಿಯಾಗಿದ್ದಾರೆ.
Uttar Pradesh | Azeem Mansoori, a 2.3 feet tall man, in Shamli district, wants to invite PM Modi & UP CM Yogi Adityanath to his wedding as he finally ties the knot in November pic.twitter.com/quhYaUyOKx
— ANI UP/Uttarakhand (@ANINewsUP) October 29, 2022
“ನಾನು ನವೆಂಬರ್ನಲ್ಲಿ ಮದುವೆಯಾಗಲಿದ್ದೇನೆ. ನಾನು ನನ್ನ ಮದುವೆಯ ಆಮಂತ್ರಣ ಪತ್ರಗಳನ್ನು ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿಗೆ ನೀಡುತ್ತೇನೆ. ನಾನು ದೆಹಲಿಗೆ ಹೋಗಿ ಅವರನ್ನು ಆಹ್ವಾನಿಸುತ್ತೇನೆ” ಎಂದು ಅಜೀಂ ಮನ್ಸೂರಿ ತಿಳಿಸಿದ್ದಾರೆ.
ಮನ್ಸೂರಿ ಅವರು ಹಲವಾರು ವರ್ಷಗಳಿಂದ ವಧುವನ್ನು ಹುಡುಕುತ್ತಿದ್ದರು. ಏಕೆಂದರೆ ಅವರ ಎತ್ತರದ ಕೊರತೆಯಿಂದಾಗಿ ಜೋಡಿಯನ್ನು ಹುಡುಕುವುದು ಕಷ್ಟಕರವಾಗಿತ್ತು. ಅವರು ತಮ್ಮ ಮದುವೆಗೆ ಸಂಬಂಧಿಸಿದಂತೆ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. 2019 ರಲ್ಲಿ, ಅವರು ವಧುವನ್ನು ಹುಡುಕಲು ಸಹಾಯ ಮಾಡಲು ಅಂದಿನ ಯುಪಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಸಂಪರ್ಕಿಸಿದ್ದರಂತೆ. ಹಲವು ದಿನಗಳ ನಂತ್ರ ಈಗ ಮನ್ಸೂರಿಗೆ ಜೋಡಿ ಸಿಕ್ಕಿದ್ದಾಳೆ.
BIGG NEWS : ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್ : ಶೀಘ್ರವೇ 128 ಮಹಿಳಾ ಸ್ವಾಸ್ಥ್ಯ ಕೇಂದ್ರ ಸ್ಥಾಪನೆ
BIG NEWS: ಇಂದು ಬೆಳಗ್ಗೆ 11 ಗಂಟೆಗೆ ʻಮನ್ ಕೀ ಬಾತ್ʼನಲ್ಲಿ ಪ್ರಧಾನಿ ಮೋದಿ ಮಾತು | Mann Ki Baat
BIG NEWS: ಮಿಜೋರಾಂನಲ್ಲಿ ಪೆಟ್ರೋಲ್ ಟ್ಯಾಂಕರ್ ಸ್ಫೋಟ: ಸುಟ್ಟು ಕರಕಲಾದ ನಾಲ್ವರು, ಹಲವರ ಸ್ಥಿತಿ ಗಂಭೀರ
BIGG NEWS : ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್ : ಶೀಘ್ರವೇ 128 ಮಹಿಳಾ ಸ್ವಾಸ್ಥ್ಯ ಕೇಂದ್ರ ಸ್ಥಾಪನೆ