ಕೊಚ್ಚಿ: ಕೊಚ್ಚಿಯಲ್ಲಿ ಚಲಿಸುವ ಕಾರಿನೊಳಗೆ 19 ವರ್ಷದ ಮಾಡೆಲ್ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರ್ನಾಕುಲಂ ದಕ್ಷಿಣ ಪೊಲೀಸರು ಮಹಿಳೆ ಸೇರಿದಂತೆ ನಾಲ್ವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಗುರುವಾರ ತಡರಾತ್ರಿ ಕೇರಳದ ಕೊಚ್ಚಿಯ ಬಾರ್ನಲ್ಲಿ ನಡೆದ ಡಿಜೆ ಪಾರ್ಟಿಯಲ್ಲಿ ಭಾಗಿಯಾಗಿದ್ದ 19 ವರ್ಷದ ಮಾಡೆಲ್ಗೆ ಮಾದಕ ದ್ರವ್ಯ ನೀಡಿ ಮೂವರು ಪುರುಷರು ಕಾರಿನಲ್ಲಿ ಕರೆದೊಯ್ದಿದ್ದಾರೆ. ಆರೋಪಿಗಳು ತಡರಾತ್ರಿಯವರೆಗೆ ನಗರವನ್ನೆಲ್ಲಾ ಸುತ್ತಾಡಿದ್ದಾರೆ. ಈ ವೇಳೆ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ, ಹಲ್ಲೆ ನಡೆಸಿ ಆಕೆಯ ಮನೆಯ ಬಳಿ ಬಿಟ್ಟು ಹೋಗಿದ್ದರು.
ಈ ಬಗ್ಗೆ ಸಂತ್ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್ಫೋಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಪ್ರಕರಣವನ್ನು ಎರ್ನಾಕುಲಂ ಸೌತ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಅಪರಾಧ ನಡೆದಿರುವುದಾಗಿ ವರದಿಯಾಗಿದೆ.
ದಕ್ಷಿಣ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತ ಮಹಿಳೆ ರಾಜಸ್ಥಾನ ಮೂಲದವರಾಗಿದ್ದು, ವೃತ್ತಿಯಲ್ಲಿ ಆಕೆಯೂ ಮಾಡೆಲ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
BIGG NEWS : `EPFO’ ಪಿಂಚಣಿದಾರರಿಗೆ `ಡಿಜಿಟಲ್ ಜೀವಂತ ಪ್ರಮಾಣ ಪತ್ರ’ದ ಕುರಿತಂತೆ ಇಲ್ಲಿದೆ ಮುಖ್ಯ ಮಾಹಿತಿ
BIGG NEWS : ನಾಳೆಯಿಂದ `ಆಯುಷ್ಮಾನ್ ಭಾರತ್ ಜನಾರೋಗ್ಯ ಯೋಜನೆ’ಗೆ ನೋಂದಣಿ ಆರಂಭ
WATCH VIDEO: ಸೀರೆಯುಟ್ಟು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ 56 ವರ್ಷದ ಮಹಿಳೆ… ವಿಡಿಯೋ ವೈರಲ್
BIGG NEWS : `EPFO’ ಪಿಂಚಣಿದಾರರಿಗೆ `ಡಿಜಿಟಲ್ ಜೀವಂತ ಪ್ರಮಾಣ ಪತ್ರ’ದ ಕುರಿತಂತೆ ಇಲ್ಲಿದೆ ಮುಖ್ಯ ಮಾಹಿತಿ