ಹೈದರಾಬಾದ್: ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಶನಿವಾರ ಹದಿನೆಂಟು ಬೀದಿನಾಯಿಗಳಿಗೆ ವಿಷ ನೀಡಿ ಸಾಯಿಸಲಾಗಿದೆ.
ನಾಯಿಗಳಿಗೆ ಮಾರಕ ಚುಚ್ಚುಮದ್ದು ನೀಡಿ ಸಾಯಿಸಲು ಚೇಬ್ರೋಲೆ ಗ್ರಾಮದ ಸರಪಂಚ್ ಮತ್ತು ಕಾರ್ಯದರ್ಶಿ ಆದೇಶ ನೀಡಿದ್ದರು. ಅವರಾದೇಶದಂತೆ ಈ ಕೃತ್ಯವೆಸಗಿರುವ ಬಗ್ಗೆ ಆರೋಪಿ ವೀರಬಾಬು ಒಪ್ಪಿಕೊಂಡಿದ್ದು, ಆತನ ವಿರುದ್ಧ ಆಂಧ್ರಪ್ರದೇಶ ಪೊಲೀಸರು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಶ್ವಾನಗಳ ಸಾವಿನ ನಂತರ ಗ್ರಾಮದ ಮುಖ್ಯಸ್ಥರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಪ್ರಾಣಿ ಹಕ್ಕುಗಳ ಗುಂಪುಗಳು ಕರೆ ನೀಡಿವೆ.
ಈ ವರ್ಷದ ಆರಂಭದಲ್ಲಿ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಬೀದಿನಾಯಿಗಳನ್ನು ಕೊಂದು ಹಾಕಲಾಗಿತ್ತು.
WATCH VIDEO : ಇಸ್ತಾನ್ಬುಲ್ನಲ್ಲಿ ಹೊತ್ತಿ ಉರಿದ 24 ಅಂತಸ್ತಿನ ಕಟ್ಟಡ, ಭಯಾನಕ ವಿಡಿಯೋ ವೈರಲ್